ತನ್ನ ಕ್ಷೇತ್ರದ ಮತದಾರನೋರ್ವನಿಗೆ ಕುಣಿಗಲ್ ಶಾಸಕ ಡಾ. ರಂಗನಾಥ್ ಸ್ವತಃ ತಾನೆ ಮುಂದೆ ನಿಂತು ಮೂಳೆ ಆಪರೇಷನ್ ಮಾಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಅಮೃತೂರು ಬಳಿಯ ದೊಡ್ಡಕಲ್ಲಹಳ್ಳಿ ಗ್ರಾಮದ ಪರಮೇಶ್ ಎಂಬಾತನಿಗೆ ಬೈಕ್ ಅಪಘಾತದಲ್ಲಿ ಭುಜದ ಮೂಳೆ ಮುರಿದಿತ್ತು ಚಿಕಿತ್ಸೆ ಪಡೆಯಲು ಹಣದ ಕೊರತೆ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲಾಗದೇ ಪರಮೇಶ್ ಶಾಸಕ ಡಾ. ರಂಗನಾಥ್ ಅವರನ್ನು ಭೇಟಿ ಮಾಡಿ ಅವಲತ್ತುಕೊಂಡಿದ್ದಾನೆ. ಕೂಡಲೇ ಆತನನ್ನ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ, ವೃತ್ತಿಯಲ್ಲಿ ವೈದ್ಯನಾಗಿರುವ ಕುಣಿಗಲ್ ಶಾಸಕ ಡಾ. ರಂಗನಾಥ್ ಸ್ವತಃ ಮುಂದೆ ನಿಂತು ಭುಜದ ಮೂಳೆ ಆಪರೇಷನ್ ಮಾಡಿದ್ದಾರೆ.