ಯಾದಗಿರಿ : ಕ್ರಿಮಿನಾಶಕ ಸಿಂಪಡಿಸಲು ಸಿದ್ಧಪಡಿಸಿದ ನೀರಿಗೆ ಕಳೆನಾಶಕ ಬೆರೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಕಿಡಿಗೇಡಿಗಳ ಕುಕೃತ್ಯಕ್ಕೆ ರೈತನ ಬೆಳೆ ಸಂಪೂರ್ಣ ನಾಶವಾಗಿದೆ.
ರೈತ ನಾಗರಾಜ ತಳವಾರ ಬೆಳಗ್ಗೆ ಸಿಂಪಡಿಸಲು ಕ್ರಿಮಿನಾಶಕ ಸಿದ್ಧಪಡಿಸಿಟ್ಟಿದ್ದ ನೀರಿಗೆ ಕಿಡಿಗೇಡಿಗಳು ಕಳೆನಾಶಕ ಬೆರೆಸಿದ್ದನ್ನು ಸಿಂಪಡಿಸಿರುವ ಪರಿಣಾಮ ಸಂಪೂಣ ಬೆಳೆ ನಾಶವಾಗಿದ್ದು, ರೈತ ನಾಗರಾಜ ಕಂಗಾಲಾಗಿದ್ದಾರೆ.
ರೈತ ನಾಗರಾಜ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ತರಕಾರಿ ಬೆಳೆದಿದ್ದರು. ಬೆಳೆಗೆ ಕೀಟಗಳ ಕಾಟ ಹೆಚ್ಚಾಗಿದ್ದರಿಂದ ಕೀಟನಾಶಕ ಸಿಂಪಡಿಸಲು ನೀರು ರೆಡಿ ಮಾಡಿದ್ದರು. ಕೀಟನಾಶಕ ರೆಡಿ ಮಾಡಿದ ಬ್ಯಾರೆಲ್ ಗೆ ಕಳೆನಾಶಕ ಕಿಡಿಗೇಡಿಗಳು ಬೆರೆಸಿದ್ದರು. ತಿಳಿಯದೇ ಬೆಳೆಗೆ ಸಿಂಪಡಿಸಿದ್ದರು. ಎರಡು ದಿನ ಬಿಟ್ಟು ಜಮೀನಿಗೆ ಹೋದಾಗ ಸುಟ್ಟು ಹೋಗಿರುವ ಬೆಳೆ ನಾಶವಾಗಿದೆ.
ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳೆನಾಶಕ ಎಣ್ಣೆ ಬೆರೆಕೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ವಹಿಸುವಂತೆ ರೈತ ನಾಗರಾಜ್ ತಳವಾರ ಆಗ್ರಹಿಸಿದ್ದಾರೆ.



















