ದಾವಣಗೆರೆ: ರಾಗಿ ಬೇರ್ಪಡಿಸುವ ಯಂತ್ರ ಹಾಗೂ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ಹತ್ತಿರದ ನಡೆದಿದೆ. ಘಟನೆಯಲ್ಲಿ ಬಂಗರಕ್ಕನಗುಡ್ಡ ಗ್ರಾಮದ ಕಾರ್ಮಿಕರಾದ ಮಹೇಶ್ (30) ಮತ್ತು ರಾಧಮ್ಮ (45) ಸಾವನ್ನಪ್ಪಿದ್ದಾರೆ.
ಟ್ರ್ಯಾಕ್ಟರ್ಗೆ ರಾಗಿ ಬೇರ್ಪಡಿಸುವ ಯಂತ್ರವನ್ನು ಜೋಡಿಸಲಾಗಿತ್ತು. ಟ್ರ್ಯಾಕ್ಟರ್ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಯಂತ್ರ ಪಲ್ಟಿಯಾಗಿದೆ. ಆಗ ಇಬ್ಬರು ಕಾರ್ಮಿಕರು ಕೆಳಗೆ ಸಿಲುಕಿದ್ದಾರೆ. ಕಾರ್ಮಿಕರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.