ಬೆಂಗಳೂರು: ಭಾರತೀಯ ಶೂಟರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದಿಂದ ವಿಂಡ್ಸರ್ ಇವಿ ಉಡುಗೊರೆಯಾಗಿ ನೀಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ನಂತರ, ಸೆಪ್ಟೆಂಬರ್ 2024ರಲ್ಲಿ ವಿಂಡ್ಸರ್ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಆಗ ಜೆಎಸ್‌ಡಬ್ಲ್ಯೂ ಎಂಜಿ ಇಂಡಿಯಾ ಎಲ್ಲ ಒಲಿಂಪಿಕ್ ಪದಕ ವಿಜೇತರಿಗೆ ವಿಂಡ್ಸರ್ ಇವಿ ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿತ್ತು. ಕಾರು ತಯಾರಕ ಸಂಸ್ಥೆ ಈ ಭರವಸೆಯನ್ನು ಪೂರೈಸಿ, ಕಳೆದ ವರ್ಷದ ನವೆಂಬರ್‌ನಲ್ಲಿ ಚಂಡೀಗಢದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಡೆಲಿವರಿ ಪ್ರಾರಂಭಿಸಿತ್ತು . ಈಗ, ಮನು ಭಾಕರ್ ತಮ್ಮ ಕಾರನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ವಿಂಡ್ಸರ್ ಉತ್ಪಾದನೆಯ 15,000 ಯೂನಿಟ್ ಗುರಿ ತಲುಪಿರುವ ಸಂದರ್ಭದಲ್ಲಿ ಸಂಭವಿಸುತ್ತಿದೆ.
ಮನು ಭಾಕರ್ ಯಾರು?
ಮನು ಭಾಕರ್ ಭಾರತದ ಅತ್ಯಂತ ಯಶಸ್ವಿ ಮಹಿಳಾ ಶೂಟರ್ ಆಗಿದ್ದಾರೆ. 23 ವರ್ಷದ ಈ ಕ್ರೀಡಾಪಟು ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗಗಳಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಇದು ಭಾರತದ ಪಿಸ್ತೂಲ್ ಶೂಟಿಂಗ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಾಧನೆಯಾಗಿದೆ.
20 ವರ್ಷಗಳಲ್ಲಿ ಒಲಿಂಪಿಕ್ಸ್ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಶೂಟರ್. ಇದರೊಂದಿಗೆ, ಅವರು ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಯೂತ್ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಹರಿಯಾಣದ ಝಜ್ಜರ್ ಜಿಲ್ಲೆಗೆ ಸೇರಿದ ಮನು ಭಾಕರ್ 14ನೇ ವಯಸ್ಸಿನಲ್ಲಿ ಶೂಟಿಂಗ್ ಅಭ್ಯಾಸ ಪ್ರಾರಂಭಿಸಿದ್ದರು.
ಮನು ಭಾಕರ್ ತಮ್ಮ ಮುಂದಿನ ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ನಾಲ್ಕು ಬಾರಿ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಜಸ್ಪಾಲ್ ರಾಣಾ ಅವರ ತರಬೇತಿದಾರರಾಗಿಯೇ ಮುಂದುವರಿಯಲಿದ್ದಾರೆ ಎಂದು ಅವರು ಖಚಿತಪಡಿಸಿದ್ದರು.
ಜಸ್ಪಾಲ್ ರಾಣಾ ಅವರನ್ನು ಭಾರತದ ರಾಷ್ಟ್ರೀಯ ಶೂಟಿಂಗ್ ಸಂಸ್ಥೆ ಪಿಸ್ತೂಲ್ ವಿಭಾಗದ ಉನ್ನತ ಕಾರ್ಯಕ್ಷಮತೆಯ ತರಬೇತಿದಾರರಾಗಿಯಾಗಿ ನೇಮಿಸಿದೆ. ಪ್ಯಾರಿಸ್‌ನಲ್ಲಿ ಮನು ಭಾಕರ್ ಒಲಿಂಪಿಕ್ ಪದಕ ಗೆಲ್ಲಲು ಅವರ ಮಾರ್ಗದರ್ಶನ ಸಹಾಯ ಮಾಡಿದ್ದು, ಈ ಮಾರ್ಗದರ್ಶನ ಮುಂದುವರಿಯಲಿದೆಯೆಂದು ಅವರು ಆಶಿಸಿದ್ದಾರೆ.
ಎಂಜಿ ವಿಂಡ್ಸರ್ ಇವಿ: ಪ್ರಮುಖ ಆಕರ್ಷಣೆಗಳು
ಮನು ಭಾಕರ್ ಉಡುಗೊರೆಯಾಗಿ ಪಡೆದ ವಿಂಡ್ಸರ್ ಇವಿ ಕುರಿತು ತಿಳಿದುಕೊಳ್ಳೋಣ. ಇದು ಎಂಜಿ ಇಂಡಿಯಾದ ಪ್ರಮುಖ ಮಾಡೆಲ್ ಆಗಿದ್ದು ಮೂರು ಪ್ರಕಾರಗಳಲ್ಲಿ ಲಭ್ಯವಿದೆ – ಎಕ್ಸೈಟ್, ಎಕ್ಸ್ಕ್ಲೂಸಿವ್ ಮತ್ತು ಎಸೆನ್ಸ್. ಶೋರೂಮ್ ಬೆಲೆ 12 ಲಕ್ಷ ರೂಪಾಯಿಯಿಂದ 14 ಲಕ್ಷ ರೂಪಾಯಿವರೆಗೆ ಇದೆ. ಎಂಜಿ ಎರಡು ಮಾಲೀಕತ್ವ ಯೋಜನೆಗಳನ್ನು ನೀಡುತ್ತದೆ. ನೇರವಾಗಿ ವಾಹನ ಖರೀದಿಸುವುದು ಅಥವಾ ಬ್ಯಾಟರಿ ಸೇವೆಯಾಗಿ ಖರೀದಿಸುವುದು. ಈ ಮಾದರಿಯಲ್ಲಿ, ವಾಹನದ ಪ್ರಾರಂಭಿಕ ಖರ್ಚನ್ನು ಕಡಿಮೆ ಮಾಡಲು ಮಾಲೀಕರು ಬ್ಯಾಟರಿ ಪ್ಯಾಕ್ ಖರೀದಿಸದೇ, ಮಾಸಿಕ ಬ್ಯಾಟರಿ ಬಾಡಿಗೆ ಪಾವತಿಸಬಹುದು.
ಈ ವಿದ್ಯುತ್ ವಾಹನ ಆಕರ್ಷಕ ವಿನ್ಯಾಸ ಹೊಂದಿದ್ದು, ಭವಿಷ್ಯದ ಮಾದರಿಯಂತೆ ಕಾಣುತ್ತದೆ. ಇದರ ಮುಂಭಾಗದಲ್ಲಿ ಸ್ಪ್ಲಿಟ್ ಹೆಡ್ಲ್ಯಾಂಪ್‌ಗಳು, ಸಣ್ಣ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್‌ಗಳುಇವೆ. . 18 ಇಂಚಿನ ಐದು ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಆಕರ್ಷಕ ಟೈಲ್ ಲ್ಯಾಂಪ್ಗಳು ಇದರ ವಿನ್ಯಾಸವನ್ನು ಮತ್ತಷ್ಟು ಸುಂದರಗೊಳಿಸುತ್ತವೆ. ಇದು 4,295 ಮಿಮೀ ಉದ್ದ, 1,850 ಮಿಮೀ ಅಗಲ ಮತ್ತು 1,677 ಮಿಮೀ ಎತ್ತರ ಹೊಂದಿದ್ದು, ವೀಲ್ ಬೇಸ್ 2,700 ಮಿಮೀ ಇದೆ.
ಕಾರಿನ ಒಳಭಾಗ ಆಧುನಿಕ ವಿನ್ಯಾಸ ಹೊಂದಿದ್ದು, ಸಂಪೂರ್ಣ ಕಪ್ಪು ಸೀಟುಗಳು , ತಾಮ್ರ ಬಣ್ಣದ ಅಚ್ಚುಬದ್ಧ ಅಲಂಕಾರಗಳು ಇದರಲ್ಲಿ ಒಳಗೊಂಡಿವೆ. ಡ್ಯಾಶ್‌ಬೋರ್ಡ್‌ನಲ್ಲಿ 15.6-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ.
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಒಂಬತ್ತು ಸ್ಪೀಕರ್ ಸೌಂಡ್ ವ್ಯವಸ್ಥೆ, ಆಟೊ ಕ್ಲೈಮೇಟ್ ಕಂಟ್ರೋಲ್, ಪ್ಯಾನೊರಮಿಕ್ ಸನ್ ರೂಫ್ ಇದೆ.
ವಿಂಡ್ಸರ್ 38 ಕಿಲೋವಾಟ್ ಬ್ಯಾಟರಿ ಪ್ಯಾಕ್ ಜೊತೆಗೆ ಏಕೈಕ ಮೋಟಾರ್ ವ್ಯವಸ್ಥೆಯನ್ನು ಹೊಂದಿದ್ದು, 136 ಎಚ್ಪಿ ಶಕ್ತಿ ಮತ್ತು 200 ನ್ಯಾಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇದು 331 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.