ಉಡುಪಿ : ಉಡುಪಿಯ ಹಾವಂಜೆ ಪಂಚಾಯತ್ ನ ಮದರಸಾ ವಿಚಾರದಲ್ಲಿ ವಿವಾದ ಉಂಟಾಗಿದ್ದು,ಶಾಸಕರಾದ ಯಶ್ ಪಾಲ್ ಸುವರ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾನೂನನ್ನು ಮೀರಿ ಸ್ಥಳೀಯ ಪಿಡಿಒ ಗಳು ತರಾತುರಿಯಲ್ಲಿ ಮದರಸಾಕ್ಕೆ ಪರವಾನಗಿ ಕೊಟ್ಟಿದ್ದಾರೆ. ಇದೀಗ ಅಧಿಕಾರಿಗಳು ಫೋನ್ ಸ್ವಿಚ್ ಆಫ್ ಮಾಡಿ ರಜೆಯಲ್ಲಿ ಹೋಗಿದ್ದಾರೆ.
ಹಾವಂಜೆ ವ್ಯಾಪ್ತಿಯಲ್ಲಿ ಕೇವಲ 9 ಮುಸಲ್ಮಾನರ ಮನೆಯಿದ್ದು ಅಲ್ಲಿ ಮದರಸಾದ ಅವಶ್ಯಕತೆ ಇರುವುದಿಲ್ಲ, ಆದರೂ ಕೂಡ ರಾಜ್ಯ ಸರ್ಕಾರ ಅಧಿಕಾರಿಗಳನ್ನು ಕೈಗೊಂಬೆಗಳಂತೆ ಬಳಸಿಕೊಂಡು, ಇಸ್ಲಾಮೀಕರಣವನ್ನು ಜಾರಿಗೆ ತರಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.
ನಮ್ಮ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನ ಮಾಡಬೇಡಿ,ಮೂರು ದಿನಗಳ ಒಳಗಾಗಿ ಅನುಮತಿಯನ್ನು ರದ್ದುಪಡಿಸದಿದ್ದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನ ನೀಡಿದ್ದಾರೆ.