ಬೆಂಗಳೂರು: ದೇಶದ ಗ್ರಾಮೀಣ ಪ್ರದೇಶಗಳ ಮನೆಗಳಿಗೂ ಈಗ ಅಡುಗೆ ಅನಿಲ ಸಿಲಿಂಡರ್ ಗಳು ತಲುಪಿವೆ. ಕೇಂದ್ರ ಸರ್ಕಾರದ ಯೋಜನೆಯಿಂದಾಗಿ ಕೋಟ್ಯಂತರ ಮನೆಗಳಿಗೆ ಎಲ್ ಪಿಜಿ(LPG ) ಸಿಲಿಂಡರ್ ಬಳಸುವ ಸಾರ್ವಜನಿಕರೇ ಗಮನಿಸಿ : ನಿಮಗಿದೆ 50 ಲಕ್ಷ ರೂ. ವಿಮೆ ಕವರೇಜ್ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಎಲ್ ಪಿಜಿ ಸಿಲಿಂಡರ್ ಗಳು ಸ್ವಲ್ಪ ಎಚ್ಚರ ತಪ್ಪಿದರೂ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ದೇಶದ ಪ್ರತಿಯೊಬ್ಬ ನೋಂದಾಯಿತ ಗ್ರಾಹಕರಿಗೂ 50 ಲಕ್ಷ ರೂಪಾಯಿವರೆಗೆ ವಿಮಾ ಸುರಕ್ಷತೆ ನೀಡಲಾಗಿದೆ.
ಹೌದು, ಎಲ್ ಪಿಜಿ ಸಿಲಿಂಡರ್ ಗ್ರಾಹಕರು ಸರಕಾರಿ ಸ್ವಾಮ್ಯದ ಗ್ಯಾಸ್ ಕಂಪನಿಗಳಾದ ಇಂಡೇನ್, ಎಚ್ ಪಿ, ಭಾರತ್ ಗ್ಯಾಸ್ ಕಂಪನಿಗಳಲ್ಲಿ ನೋಂದಣಿಯಾಗಿ ಎಲ್ ಪಿಜಿ ಸಂಪರ್ಕ ಪಡೆದಿದ್ದರೆ ಸಾಕು, ನಿಮಗೆ ವಿಮಾ ಕವರ್ ಸಿಗುತ್ತದೆ. ಇದಕ್ಕಾಗಿ ನೀವು ಯಾವುದೇ ಪ್ರೀಮಿಯಂ ಪಾವತಿಸಬೇಕಿಲ್ಲ. ತೈಲ ಕಂಪನಿಗಳೇ ಪ್ರೀಮಿಯಂ ಹಣ ಪಾವತಿಸುತ್ತವೆ.
ಎಲ್ ಪಿಜಿ ಅವಘಡದಲ್ಲಿ ಸಾವು ಸಂಭವಿಸಿದಲ್ಲಿ ಪ್ರತಿ ವ್ಯಕ್ತಿಗೆ 6 ಲಕ್ಷ ರೂಪಾಯಿವರೆಗೆ ಪರಿಹಾರ ದೊರೆಯುತ್ತದೆ. ಅಲ್ಲದೆ, ಪ್ರತಿ ಅವಘಡಕ್ಕೆ 30 ಲಕ್ಷ ರೂಪಾಯಿವರೆಗೆ ವೈದ್ಯಕೀಯ ವಿಮಾ ಸೌಲಭ್ಯ ದೊರೆಯುತ್ತದೆ. ಗಾಯಗೊಂಡ ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಮತ್ತು ತಕ್ಷಣವೇ 25 ಸಾವಿರ ರೂಪಾಯಿ ವೈದ್ಯಕೀಯ ಪರಿಹಾರ ದೊರೆಯುತ್ತದೆ. ಗ್ರಾಹಕರ ಆಸ್ತಿಪಾಸ್ತಿಗೆ ಎಲ್ ಪಿಜಿಯಿಂದ ಯಾವುದೇ ಹಾನಿಯಾದರೆ ಗರಿಷ್ಠ 2 ಲಕ್ಷ ರೂಪಾಯಿವರೆಗೆ ಪರಿಹಾರ ದೊರೆಯುತ್ತದೆ.
ಎಲ್ ಪಿಜಿ ಅವಘಡ ಸಂಭವಿಸಿದಾಗ ಗ್ರಾಹಕರು ಡೀಲರ್ ಅಥವಾ ವಿತರಕರಿಗೆ ಬರವಣಿಗೆಯಲ್ಲಿ ಮಾಹಿತಿ ನೀಡಬೇಕು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದಾದ ಬಳಿಕ ಪ್ರದೇಶ ಅಧಿಕಾರಿ ತನಿಖೆ ನಡೆಸುತ್ತಾರೆ. ಎಲ್ ಪಿಜಿ ಸ್ಫೋಟದಿಂದಲೇ ಅವಘಡ ಸಂಭವಿಸಿದೆ ಎಂಬುದು ಖಚಿತವಾದರೆ ಎಲ್ ಪಿಜಿ ವಿತರಕ ಸಂಸ್ಥೆ ಅಥವಾ ಪ್ರದೇಶ ಕಚೇರಿ ವಿಮಾ ಕಂಪನಿಯ ಸ್ಥಳೀಯ ಕಚೇರಿಗೆ ತಿಳಿಸಲಾಗುತ್ತದೆ. ಇದಾದ ಬಳಿಕ ಸಂಬಂಧಪಟ್ಟ ವಿಮಾ ಕಂಪನಿಯಿಂದ ಗ್ರಾಹಕರಿಗೆ ವಿಮೆಯ ಕ್ಲೇಮ್ ಸಿಗುತ್ತದೆ.
ಇದನ್ನೂ ಓದಿ: 2-3 ಪಿಎಫ್ ಖಾತೆಗಳಲ್ಲಿರುವ ಹಣವನ್ನು ಒಂದೇ ಖಾತೆಗೆ ಜಮೆ ಮಾಡುವುದು ಹೇಗೆ? ಹೀಗೆ ಮಾಡಿ



















