ರಾಯಚೂರು : ರಸ್ತೆ ಬದಿ ನಿಂತಿದ್ದ ತಂದೆ ಮತ್ತು ಮಗ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್ನಲ್ಲಿ ನಡೆದಿದೆ. ತಂದೆ ನಾಗಪ್ಪ(65), ಪುತ್ರ ರಮೇಶ್(46) ಮೃತರು.
ರಸ್ತೆ ಬದಿ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದ ವೇಳೆ ದುರಂತ ಸಂಭವಿಸಿದೆ. ಏಕಾಏಕಿ ತಂದೆ, ಮಗನ ಲಾರಿ ಹರಿದಿದ್ದರಿಂದ ಮೃತದೇಹಗಳು ಛಿದ್ರವಾಗಿದೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಅಯ್ಯಪ್ಪ ಮಾಲೆ ಧರಿಸಿಬಂದ ವಿದ್ಯಾರ್ಥಿಗಳನ್ನ ಕಾಲೇಜಿನಿಂದ ಹೊರಹಾಕಿದ ಪ್ರಿನ್ಸಿಪಾಲ್ | ಭುಗಿಲೆದ್ದ ಆಕ್ರೋಶ



















