ಮಂಡ್ಯ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಅವರು, ಮೈಸೂರಿನ ಹಿನಕಲ್ ನಲ್ಲಿ 1986 ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗಿತ್ತು. 17/4 ರಲ್ಲಿ ಎಲ್ಲ ತೆಗೆದರೆ ಗೊತ್ತಾಗುತ್ತದೆ ಎಂದು ಎಂದು ಹೇಳಿದ್ದಾರೆ.
ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. ಅದು ಕೇವಲ 20 ದಿನಗಳಲ್ಲಿ ಡಿನೋಟಿಫಿಕೇಷನ್ ಆಗುತ್ತದೆ. ಅದನ್ನು ಸಿಎಂ ಸಿದ್ದರಾಮಯ್ಯ ಖರೀದಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈಗಾಗಲೇ ಪತ್ನಿ ಪಾರ್ವತಿ ಪಡೆದುಕೊಂಡಿದ್ದ 15 ಮುಡಾ ಸೈಟ್ ಪ್ರಕಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಈ ಮಧ್ಯೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ವೇಳೆಯೇ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ತಮ್ಮ ಪತ್ನಿಯಿಂದ ಮುಡಾಗೆ ಸೈಟ್ ಹಿಂದಿರುಸಿದ್ದಾರೆ. ಆದರೂ ಸಹ ಸಿಎಂ ಟೆನ್ಷನ್ನಲ್ಲಿ ದಿನ ದೂಡುತ್ತಿದ್ದಾರೆ.