ಬೆಂಗಳೂರು: ಕೇರಳದಲ್ಲಿ ಕೆಎಸ್ ಆರ್ ಟಿಸಿ ಬಸ್ ಭೀಕರ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.
ಕೇರಳದ ವಯನಾಡಿನಲ್ಲಿ ಟೂರಿಸ್ಟ್ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ವಯನಾಡಿನ ಕಾಟಿಕುಳಂ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೈಸೂರು ಘಟಕಕ್ಕೆ ಸೇರಿದ KA 09 F 5392 ನಂಬರ್ ನ ಬಸ್ ಅಪಘಾತವಾಗಿದೆ.
ಈ ಘಟನೆ ಮಂಗಳವಾರ ಸಂಜೆ ಕಾಟಿಕುಳಂ ಬಳಿ ನಡೆದಿದೆ. ಗಾಯಾಳುಗಳಿಗೆ ವಯನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದಿದೆ. KSRTC ಹಾಗೂ ಟೂರಿಸ್ಟ್ ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿವೆ ಎನ್ನಲಾಗಿದ್ದು, ನಿಯಂತ್ರಣ ತಪ್ಪಿ ಬಸ್ ಗಳು ಮುಖಾಮುಖಿಯಾಗಿವೆ.