ಬೆಂಗಳೂರು: ಸಿಎಂಗೆ ಮಂಡಿ ನೋವಿರುವ ಹಿನ್ನೆಲೆಯಲ್ಲಿ ಅವರು ವ್ಹೀಲ್ ಚೇರ್ ನಲ್ಲಿ ತೆರಳುತ್ತಿದ್ದಾರೆ. ವ್ಹೀಲ್ ಚೇರ್ ನಲ್ಲೇ ಕುಳಿತುಕೊಂಡು ಈ ಬಾರಿಯ ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಸ್ಪೀಕರ್ ಅನುಮತಿಯನ್ನು ಕೂಡ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕೂಡ ವ್ಯವಸ್ಥೆ ಮಾಡಲಾಗಿದೆ.
ಸಿಎಂ ವ್ಹೀಲ್ ಚೇರ್ ನಲ್ಲೇ ಸಂಚರಿಸುವ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರವೇಶ ಮಾಡುವ ತನಕ ವೀಲ್ ಚೇರ್ ಹೋಗಲು ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ವ್ಹೀಲ್ ಚೇರ್ ಮೂಲಕ ಹೋಗಲು ಮೂರು ಕಡೆ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ.
ವಿಧಾನಸೌಧ ಲಾಂಜ್ ಹಾಗೂ ವಿಧಾನಸಭೆ ಆಡಳಿತ ಪಕ್ಷದ ಮೊಗಸಾಲೆ, ವಿಧಾನಸಭೆ ಪ್ರವೇಶ ದ್ವಾರ ಸೇರಿದಂತೆ ಮೂರು ಕಡೆ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ವಿಧಾನಸಭೆ ಪೂರ್ವ ಮೊಗಸಾಲೆ ಮೂಲಕ ಪ್ರವೇಶಿಸಲು ರ್‍ಯಾಂಪ್ ಅಳವಡಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಬಜೆಟ್ ಪೂರ್ವ ತಯಾರಿಗೂ ಮುನ್ನ ಅವರಿಗೆ ಮಂಡಿ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದು, ವೈದ್ಯರು ವಿಶ್ರಾಂತಿಯ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂ ವ್ಹೀಲ್ ಚೇರ್ ನಲ್ಲೇ ಸಂಚರಿಸುತ್ತಿದ್ದಾರೆ.