ನವದೆಹಲಿ: ಮೊದಲ ಆವೃತ್ತಿಯ ಖೋ ಖೋ ವಿಶ್ವ ಚಾಂಪಿಯನ್ ಆಗಿ ಭಾರತೀಯ ಮಹಿಳಾ ತಂಡ ಹೊರ ಹೊಮ್ಮಿದೆ.
ದೆಹಲಿಯಲ್ಲಿ ನಡೆದ ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ನೇಪಾಳ ತಂಡವನ್ನು ಎದುರಿಸಿತ್ತು. ಫೈನಲ್ ಪಂದ್ಯದಲ್ಲೂ ಏಕ ಪಕ್ಷೀಯ ಆಟ ಪ್ರದರ್ಶಿಸಿದ ಭಾರತೀಯ ವನಿತೆಯರು ನೇಪಾಳ ತಂಡದ ಮೇಲೆ ಸವಾರಿ ಮಾಡಿದರು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಭಾರತೀಯ ತಂಡವೇ ಚಾಂಪಿಯನ್ ಆಗಲಿದೆ ಎಂದು ಖೋ-ಖೋ ಅಭಿಮಾನಿಗಳು ಊಹಿಸಿದ್ದರು. ಅದರಂತೆ ಭಾರತೀಯ ವನಿತೆಯರು ಪ್ರದರ್ಶನ ನೀಡಿದ್ದು, ಚೊಚ್ಚಲ ಟೂರ್ನಿಯ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಟೂರ್ನಿಯಲ್ಲಿ ಭಾರತದ ಸಿಂಹಿಣಿಯರ ಆರ್ಭಟಕ್ಕೆ ಎದುರಾಳಿ ತಂಡಗಳೆಲ್ಲ ಮಕಾಡೆ ಮಲಗಿದವು. ಪರಿಣಾಮ ಒಂದೇ ಒಂದು ಪಂದ್ಯದಲ್ಲೂ ಭಾರತ ತಂಡಕ್ಕೆ ಎದುರಾಳಿಗೂ ಪೈಪೋಟಿ ನೀಡಲಿಲ್ಲ. ಹೀಗಾಗಿ ಎಲ್ಲ ಪಂದ್ಯಗಳಲ್ಲಿ ಬೃಹತ್ ಅಂತರದ ಗೆಲುವು ದಕ್ಕಿತು. ಫೈನಲ್ ಪಂದ್ಯದಲ್ಲಿ ಭಾರತೀಯ ತಂಡ 78-40 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ.