ತೆಲಂಗಾಣ : ಪಾನ್ ಮಸಾಲ ಮತ್ತು ಗುಟ್ಕಾ ಸಾಗಿಸುತ್ತಿದ್ದ ಲಾರಿಯನ್ನು ದರೋಡೆಕೋರರ ತಂಡವೊಂದು ಹಗಲು ಹೊತ್ತಿನಲ್ಲಿ ದರೋಡೆ ಮಾಡಿದ ಘಟನೆ ಜಹೀರಾಬಾದ್ – ಬೀದರ್ ಅಂತಾರಾಜ್ಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಸೋಮವಾರ ಮಧ್ಯಾಹ್ನ ಸಂಗಾರೆಡ್ಡಿ ಜಿಲ್ಲೆಯ ನೈಲ್ಕಲ್ ಮಂಡಲದ ಗಂಗ್ವಾರ್ ಛೇದಕದ ಬಳಿ ಈ ದರೋಡೆ ನಡೆದಿದ್ದು, ಬುಧವಾರ ಲಾರಿ ಮಾಲೀಕರು ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಲಾರಿ ದರೋಡೆ ಮಾಡಿದ ತಂಡ ಬೀದರ್‌ನಿಂದ ಬಂದಿರುವ ಸಾಧ್ಯತೆ ಇದೆ. ಜೊತೆಗೆ ಲಾರಿಯನ್ನು ಅದು ಹೊರಟ ಸ್ಥಳದಿಂದಲೇ ಹಿಂಬಾಲಿಸಿಕೊಂಡು ಬಂದು ದರೋಡೆ ಮಾಡಿರಬಹುದು. ಇದೇ ರೀತಿಯ ಘಟನೆಗಳ ಬಗ್ಗೆ ನಿಗಾ ಇಡಲು ಪೊಲೀಸರು ಮಾರ್ಗದ ಉದ್ದಕ್ಕೂ ಠಾಣೆಗಳಲ್ಲಿ ಅಲರ್ಟ್ ಘೋಷಿಸಿದ್ದಾರೆ.
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ದರೋಡೆಗಳನ್ನು ತಡೆಗಟ್ಟಲು ಅಂತಾರಾಜ್ಯ ಹೆದ್ದಾರಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಬನ್ನೇರುಘಟ್ಟ | ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ, ಗಂಭೀರ ಗಾಯ



















