ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೆ (IPL 2025) ದಿನಗಣನೆ ಆರಂಭವಾಗಿದೆ. ಹರಾಜಿಗೆ ಒಟ್ಟು 574 ಆಟಗಾರರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಈ ಆಟಗಾರರನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಸೆಟ್ ನಲ್ಲಿ ಹಲವರು ಕಾಣಿಸಿಕೊಂಡರೆ, ಎರಡನೇ ಸೆಟ್ ನಲ್ಲಿ ರಾಹುಲ್ ಸೇರಿದಂತೆ ಕೆಲವರು ಇದ್ದಾರೆ.
ಕಳೆದ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಈ ಬಾರಿ ಮೆಗಾ ಹರಾಜಿಗೆ ಹೆಸರು ನೀಡಿದ್ದಾರೆ. ಕನ್ನಡಿಗನಿಗಾಗಿ ದ್ವಿತೀಯ ಸುತ್ತಿನಲ್ಲಿ ಬಿಡ್ಡಿಂಗ್ ನಡೆಯಲಿದೆ. ಹಲವು ತಂಡಗಳು ರಾಹುಲ್ ಗಾಗಿ ಫೈಟ್ ನಡೆಸಬಹುದು ಎನ್ನಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರ ಬಂದಿರುವ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಚಹಲ್ ಹೆಸರಿದೆ. ಇಂಗ್ಲೆಂಡ್ ತಂಡದ ಆಲ್ರೌಂಡರ್ ಲಿಯಾನ್ ಲಿವಿಂಗ್ಸ್ಟೋನ್ ಕೂಡ ದ್ವಿತೀಯ ಸೆಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಭಾರತೀಯ ವೇಗದ ಬೌಲರ್ ಮೊಹಮ್ಮದ್ ಶಮಿ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. ಈ ಬಾರಿ ಹರಾಜು ಅಂಗಳಕ್ಕೆ ಇಳಿದಿದ್ದು, ದ್ವಿತೀಯ ಸೆಟ್ ನಲ್ಲಿ ಹೆಸರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್, ಕೂಡ ಎರಡನೇ ಸೆಟ್ ನ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಡೆವಿಡ್ ಮಿಲ್ಲರ್ ಈ ಬಾರಿ ಎರಡನೇ ಸುತ್ತಿನಲ್ಲಿ ಕಾಣಿಸಲಿದ್ದಾರೆ.