ಗುಬ್ಬಿ : ಗುಬ್ಬಿ ತಾಲ್ಲೂಕಿನ ಮಂಚಲದೊರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಂಪಯ್ಯ ಎಂ.ಆರ್. ಅಧ್ಯಕ್ಷರಾಗಿ ಆಯ್ಕೆಯಾದರೆ, ಯರಬಳ್ಳಿ ಪುಟ್ಟಸಿದ್ದಪ್ಪನವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
8 ಮತಗಳನ್ನು ಪಡೆದು ಕೆಂಪಯ್ಯ ಅಧ್ಯಕ್ಷರಾದರೆ, ಯರಬಳ್ಳಿ ಪುಟ್ಟಸಿದ್ದಪ್ಪ 5 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಮಂಚಲದೊರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ನಿರೀಕ್ಷೆಯಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಳಗಕ್ಕೆ ಧಕ್ಕಿದವು. ಶಾಸಕ ಎಸ್.ಆರ್.ಶ್ರೀನಿವಾಸ್ ಬಳಗಕ್ಕೆ ತೀವ್ರ ಮುಖಭಂಗವಾಗಿದೆ.
ಕೆ.ಎನ್.ರಾಜಣ್ಣ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಬಳಗದ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಈ ವೇಳೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಂಭ್ರಮಿಸಿದರು ನೂತನ ಅಧ್ಯಕ್ಷ ಕೆಂಪಯ್ಯ ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ಗ್ರಾಮೀಣ ಭಾಗದ ರೈತರಿಗೆ ಸಾಲ ಸೌಲಭ್ಯವನ್ನು ಕೊಡಿಸುತ್ತೇನೆ. ಪ್ರತಿಯೊಬ್ಬ ರೈತರು ಸಾಲವನ್ನು ಪಡೆದು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.
ರೈತರಿಗೆ ಅಡಿಕೆ ಸಾಲ, ವಾಹನ ಸಾಲ, ಬೆಳೆಸಾಲ ಸೇರಿದಂತೆ ಎಲ್ಲ ರೀತಿಯ ಅನುಕೂಲವನ್ನು ಮಾಡಿಕೊಡಲು ಎಲ್ಲ ನಿರ್ದೇಶಕರ ಸಹಕಾರ ಪಡೆದು ಅಭಿವೃದ್ದಿ ಮಾಡಿಕೊಡಲು ಶ್ರಮಿಸುತ್ತೇನೆ ಎಂದಿದ್ದಾರೆ.
ಸಂಘದ ನಿರ್ದೇಶಕ ದೇವರಾಜು ಮಾತನಾಡಿದರು. ಸಂಘದ ಉಪಾಧ್ಯಕ್ಷ ಕರಿದ್ಯಾಮಯ್ಯ, ನಿರ್ದೇಶಕರಾದ ದೇವರಾಜು, ನಾಗರಾಜು, ಗೌರಮ್ಮ, ಶಿವಕುಮಾರ್, ಶಿವಣ್ಣ, ಮೇಲ್ವಿಚಾರಕ ನಿಜಾನಂದಮೂರ್ತಿ, ಚುನಾವಣೆ ಅಧಿಕಾರಿ ಲಿಯಾಖತ್ ಅಲಿ ಖಾನ್, ಸಂಘದ ಕಾರ್ಯದರ್ಶಿ ರಂಗನಾಥ್, ಮುಖಂಡ ನಲ್ಲೂರು ಸೋಮಣ್ಣ, ತಮ್ಮಯ್ಯ, ನಾಗರಾಜು, ಸೌಭಾಗ್ಯಮ್ಮ, ಪುಟ್ಟರಾಜು ಸೇರಿದಂತೆ ಹಲವರು ಇದ್ದರು.