ಟೊರೊಂಟೊ: WWEನಲ್ಲಿ ಬರೋಬ್ಬರಿ 16 ಬಾರಿ ಚಾಂಪಿಯನ್ ಆಗಿರುವ ಜಾನ್ ಸೀನಾ ಇನ್ನು ಮುಂದೆ ಅಖಾಡಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
47 ವರ್ಷದ ಜಾನ್ ಸೀನಾ (John Cena) 2025 ರಿಂದ ಸ್ಪರ್ಧೆಗೆ ನಿವೃತ್ತಿ ಹೇಳುತ್ತೇನೆ ಎಂದು ಘೋಷಿಸಿದ್ದಾರೆ. ಟೊರೊಂಟೊದಲ್ಲಿ ನಡೆದಿದ್ದ ‘ಮನಿ ಇನ್ ದಿ ಬ್ಯಾಂಕ್’ ಕಾರ್ಯಕ್ರಮದಲ್ಲಿ ಈ ಕುರಿತು ಅವರು ಮಾಹಿತಿ ನೀಡಿದ್ದಾರೆ. ಇಂದು ರಾತ್ರಿ ನಾನು WWE ಗೆ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಅಧಿಕೃತವಾಗಿ ಹೇಳಿರುವ ಅವರು, ನಾನು ತಕ್ಷಣವೇ ನಿವೃತ್ತಿ ಹೇಳುವುದಿಲ್ಲ. 2025 ರ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್, ಲಾಸ್ ವೇಗಾಸ್ ನಲ್ಲಿ ರೆಸಲ್ಮೇನಿಯಾ 41 ರಲ್ಲಿ ಅಲೆಜಿಯಂಟ್ ಸ್ಟೇಡಿಯಂನಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
2002 ರಲ್ಲಿ WWE ಗೆ ಜಾನ್ ಸೀನಾ ಕಾಲಿಟ್ಟಿದ್ದರು. ಕುಸ್ತಿಯ ಜೊತೆಗೆ ಜಾನ್ ಸೀನಾ ಫಾಸ್ಟ್ ಎಕ್ಸ್, ದಿ ಇಂಡಿಪೆಂಡೆಂಟ್, ದಿ ಸೂಸೈಡ್ ಸ್ಕ್ವಾಡ್‌ನಂತಹ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು.