ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 ಜನಪ್ರಿಯವಾಗಿ “ಬಾಹುಬಲಿ” ಎಂದೆನಿಸಿಕೊಂಡಿರುವ ರಾಕೆಟ್, ಇಂದು 5.26ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಲಿದೆ.
ಚಂದ್ರಯಾನ ಮಿಷನ್-3 ಬಳಿಕ ಇದೀಗ ಇಸ್ರೋವು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಹೆಸರಿಗೆ ತಕ್ಕಂತೆ ಈ ಬಾರಿ ಬಾಹುಬಲಿ ಎಂಬ ಉಪಗ್ರಹವು ಸಿಎಂಎಸ್-03 ಎಂಬ ಅತ್ಯಂತ ಭಾರದ ಉಪಗ್ರಹ ಹೊತ್ಯೊಯಲಿದೆ. ಇದು ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನ ಮತ್ತೊಂದು ಹಂತಕ್ಕೆ ಏರಿಸಲು ಮುಂದಾಗಿದೆ. ಇಂದು ಸಂಜೆ 5.26ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋ ಮಂಡಲಕ್ಕೆ ಬಾಹುಬಲಿಯು ಜಿಗಿದಿದ್ದಾನೆ. ಈ ಉಪಗ್ರಹವು ದೇಶ ರಕ್ಷಣೆಗಾಗಿ ಮತ್ತು ಭಾರತೀಯ ನೌಕಾಪಡೆಯ ಸಂವಹನಕ್ಕಾಗಿ ಸಿದ್ದಪಡಿಸಿದ್ದಾಗಿದೆ.
ಇಸ್ರೋ ತಿಳಿಸಿದ ಪ್ರಕಾರ ಭಾರತದ ನೆಲದಿಂದ ಹೋಗುವ ಈ ಉಪಗ್ರಹವು 43.5 ಮೀಟರ್ ಎತ್ತರದ ರಾಕೆಟ್ ಇದಾಗಿದ್ದು, ಸುಮಾರು 8,000 ಕೆಜಿ ತೂಕ ಇದೆ. ಅದರ ಹೆವಿಲಿಫ್ಟ್ ಸಾಮರ್ಥ್ಯಕ್ಕಾಗಿ ಬಾಹ್ಯಾಕಾಶ ನೌಕೆಯು ‘ಬಾಹುಬಲಿ’ ಎಂಬ ಹೆಸರನ್ನು ಸೂಚಿಸಿದೆ. ಎಲ್‌ವಿಎಂ 3-ಎಂ5 ರಾಕೆಟ್‌ನಲ್ಲಿ ಪ್ರಯಾಣ ನಡೆಸುತ್ತಿರುವ ಅತೀ ಬಾರದ ಉಪಗ್ರಹ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದೆ.
2018ರ ಡಿಸೆಂಬರ್ 5ರಂದು ಫ್ರೆಂಚ್ ಗಯಾನಾದ ಕೌರೌ ಉಡಾವಣಾ ನೆಲೆಯಿಂದ ಏರಿಯನ್-5 VA-246 ರಾಕೆಟ್ ಮೂಲಕ ಅತ್ಯಂತ ಭಾರವಾದ ಸಂವಹನ ಉಪಗ್ರಹ GSAT-11 ಅನ್ನು ಉಡಾವಣೆ ಮಾಡಿತ್ತು. ಸುಮಾರು 5,854 ಕೆಜಿ ತೂಕವಿರುವ GSAT-11 ಇಸ್ರೋ ನಿರ್ಮಿಸಿದ ಮೊದಲ ಅತ್ಯಂತ ಭಾರವಾದ ಉಪಗ್ರಹವಾಗಿತ್ತು. ಇದೀಗ ಸೃಷ್ಟಿಸಿದ ಸಿಎಂಎಸ್ -03ಯೂ 8,000ಕೆಜಿ ಬಾರವನ್ನು ಹೊಂದಿದೆ.
ಇಂದು ಉಡಾವಣೆಯಾದ GSAT-11 ರಾಕೆಟ್‌ನ ಹಾರಾಟದ ಸಮಯದಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲೆರಡು ನಿಮಿಷಗಳ ಕಾಲ ಬೂಸ್ಟರ್‌ಗಳು ಉರಿದು, ನಂತರ ಕೋರ್ ಹಂತ, ಅಂತಿಮವಾಗಿ ಮೇಲಿನ ಹಂತವು ಉಪಗ್ರಹವನ್ನು ಸರಿಯಾದ ಕಕ್ಷೆಗೆ ಬಿಡುಗಡೆ ಮಾಡಿದೆ. 20-25 ನಿಮಿಷಗಳವರೆಗೆ ಆಕಾಶದಲ್ಲಿ ಹಾರಾಡಿ ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾದ ಇದು ಸಾಗರ ಭೂಪ್ರದೇಶದ ಮೇಲೆ ಸುರಕ್ಷಿತ ಸಂವಹನಗಳನ್ನು ಒದಗಿಸಿದೆ. 4,400 ಕೆಜಿ ತೂಕವಿರುವ ಈ ಉಪಗ್ರಹವು ಭಾರತದಿಂದ GTOಗೆ ಉಡಾಯಿಸಲಾದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿರುತ್ತದೆ.
ಇದು ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಭಾರತೀಯ ಭೂಪ್ರದೇಶದ ಮೇಲೆ ವಾಯ್ಸ್, ಡೇಟಾ, ವಿಡಿಯೋ ಕಾಲ್ಸ್, ನ್ಯಾವಿಗೇಶನ್ ಮತ್ತು ಮಿಲಿಟರಿ ಕಮ್ಯೂನಿಕೇಶನ್ ಸೇವೆ ಒದಗಿಸುತ್ತದೆ. ಇದರ ಕಾರ್ಯಾಚರಣೆ ಅವಧಿ 14-15 ವರ್ಷಗಳು. ಇದು ಹವಾಮಾನ ನಿರೋಧಕ ಮತ್ತು ಸುರಕ್ಷಿತವಾಗಿದೆ ಅಲ್ಲದೇ ನೌಕಾ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಕರಾವಳಿ ಕಾವಲುಗಾರರಿಗೆ ನೈಜ-ಸಮಯದ ಸಂಪರ್ಕ ನೀಡುತ್ತದೆ. ಇದು ವಿಪತ್ತು ನಿರ್ವಹಣೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿಯೂ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಮಗುವನ್ನು ಬಿಟ್ಟು ಮೆಟ್ರೋ ಹತ್ತಿದ ತಾಯಿ | ಸಿಬ್ಬಂದಿಗಳಿಂದ ಒಂದಾದ ತಾಯಿ-ಮಗು



















