ಬೆಂಗಳೂರು: ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ರಾಸಾಯನಿಕ ವಸ್ತುಗಳು ಪತ್ತೆಯಾಗುತ್ತಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಕಲ್ಲಂಗಡಿ, ಬೇಳೆ ಕಾಳು, ಇಡ್ಲಿ, ಹೋಳಿಗೆ, ಚಹಾ ಪುಡಿ ಸೇರಿದಂತೆ ಹಲವು ಪದಾರ್ಥಗಳಲ್ಲಿ ಕಲಬೆರಕೆ ಇರುವುದು ಕಂಡು ಬಂದಿದ್ದು. ಈಗ ಮತ್ತೊಂದು ಇಷ್ಟದ ಆಹಾರ ಪದಾರ್ಥದಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದನ್ನು ಆಹಾರ ಸುರಕ್ಷತಾ ಇಲಾಖೆ ಪತ್ತೆ ಮಾಡಿದೆ.
ಹೌದು. ಪನ್ನೀರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವುದನ್ನು ಆಹಾರ ಸುರಕ್ಷತಾ ಇಲಾಖೆ (Department of Food Safety) ವರದಿ ಬಹಿರಂಗಪಡಿಸಿದೆ. ಪನ್ನೀರ್ ನ್ನು ಮೆದುವಾಗಿಸಲು ಬಳಸುವ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಲಾಖೆಯ ವರದಿ ಹೇಳಿದೆ.
ರಾಜ್ಯದಲ್ಲಿನ ಸುಮಾರು 80ಕ್ಕೂ ಅಧಿಕ ಪ್ರದೇಶಗಳಲ್ಲಿನ ಪನ್ನೀರ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಬಂದಿದ್ದು, ಆತಂಕಕಾರಿ ಅಂಶ ಬಯಲಾಗಿದೆ. ಪನ್ನೀರ್ ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡು ಬಂದಿದೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ನ್ನು ಬಳಸುತ್ತಾರೆ ಮತ್ತು ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆಯ ವರದಿ ಹೇಳಿದೆ.
ಆರೋಗ್ಯ ಸಮಸ್ಯೆಗಳೇನು?
ಹೃದಯ ಸಂಬಂಧಿ ಖಾಯಿಲೆ
ಕೆಮಿಕಲ್ ಬಳಕೆ ಕ್ಯಾನ್ಸರ್ ಗ ಕಾರಣ
ಕೊಬ್ಬಿನ ಪ್ರಮಾಣ ಹೆಚ್ವಾಗುವ ಸಾಧ್ಯತೆ
ಕಿಡ್ನಿ ಸಮಸ್ಯೆ