ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಇನ್ನೆರಡು ಬಿಟ್ಟು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಮುಲುಗೆ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿದ್ದು, ರೆಡ್ಡಿ v/s ರಾಮುಲು ಮಾತಿನ ಸಮರಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸದ್ಯದಲ್ಲೇ ಕೇಂದ್ರದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಅದೇ ಸಂದರ್ಭದಲ್ಲಿ ಮಾತುಕತೆ ನಡೆಸಲು ನಡ್ಡಾ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ರಾಜ್ಯದಲ್ಲಿ ರೆಡ್ಡಿ v/s ರಾಮುಲು ಮಾತಿನ ಸಮರ ಜೋರಾಗಿದ್ದು, ಮಾಧ್ಯಮಗಳ ಮುಂದೆ ರಾಮುಲುಗೆ ಹೋಗದಂತೆ ನಡ್ಡಾ ಸೂಚನೆ ಕೊಟ್ಟಿದ್ದಾರೆ. ನಡ್ಡಾರ ಸೂಚನೆ ಮೇರೆಗೆ ರಾಮುಲು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ನಿನ್ನೆ ಮತ್ತೊಮ್ಮೆ ರಾಮುಲುಗೆ ನಡ್ಡಾರ ಕಚೇರಿಯಿಂದ ಕರೆ ಬಂದಿದ್ದು, ಇನ್ನೆರಡು ದಿನ ಬಿಟ್ಟು ದೆಹಲಿಗೆ ಬರುವಂತೆ ಸೂಚನೆ ರವಾನೆ ಮಾಡಲಾಗಿದೆ ಎನ್ನಲಾಗಿದೆ.