ಬೆಂಗಳೂರು: ರಿಸರ್ವ್ ಬ್ಯಾಂಕ್ ಇಂಡಿಯಾ (ಎಸ್ ಬಿ ಐ)ವು ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದ ಬೆನ್ನಲ್ಲೇ ಎಸ್ ಬಿ ಐ ಈಗ ನಿಶ್ಚಿತ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರಲ್ಲಿ 20 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಹಾಗಾಗಿ, ಎಸ್ ಬಿ ಐನಲ್ಲಿ ಸ್ಥಿರ ಠೇವಣಿ ಇರಿಸುವ ಗ್ರಾಹಕರಿಗೆ ಆದಾಯದಲ್ಲಿ ಕಡಿಮೆಯಾಗಲಿದೆ. ಎಲ್ಲ ಅವಧಿಗಳಿಗೂ ಬಡ್ಡಿ ದರ ಇಳಿಕೆಯಾಗಿದ್ದು, ಎಲ್ಲರಿಗೂ ಆದಾಯ ಕಡಿಮೆಯಾಗಲಿದೆ.
ಎಷ್ಟು ದಿನ ಇಟ್ಟರೆ ಎಷ್ಟು ಬಡ್ಡಿ?
- 7 – 45 ದಿನ- 3.3%
- 46-179 ದಿನ- 5.3%
- 180 -210 ದಿನ- 6.05%
- 211 ದಿನ-1 ವರ್ಷ 6.3%
- ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ- 6.5%
- ಎರಡು ವರ್ಷದಿಂದ 3 ವರ್ಷಕ್ಕಿಂತ ಕಡಿಮೆ- 6.7%
- ಮೂರು ವರ್ಷದಿಂದ 5 ವರ್ಷಕ್ಕಿಂತ ಕಡಿಮೆ- 6.55%
- ಐದು ವರ್ಷದಿಂದ 10 ವರ್ಷ- 6.3%
ಅಮೃತ್ ವೃಷ್ಟಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ವರ್ಷಕ್ಕೆ ಶೇ. 7.35ರಷ್ಟು ಬಡ್ಡಿ ಸಿಗುತ್ತದೆ. ಬಡ್ಡಿ ಪರಿಷ್ಕರಣೆಯ ನಂತರ, ಸೂಪರ್ ಸೀನಿಯರ್ ಸಿಟಿಜನ್ಗಳಿಗೆ (80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು) ವಾರ್ಷಿಕ ಶೇ. 7.45ರಷ್ಟು ಬಡ್ಡಿಸಿಗುತ್ತದೆ. ಬಡ್ಡಿದರಗಳನ್ನುಸಾಮಾನ್ಯ ನಾಗರಿಕರು, ಹಿರಿಯ ನಾಗರಿಕರು ಮತ್ತು ಸೂಪರ್ ಸೀನಿಯರ್ ನಾಗರಿಕರು (80 ವರ್ಷ ಮತ್ತು ಮೇಲ್ಪಟ್ಟವರು) ಎಲ್ಲರಿಗೂ 20 ಬ್ಯಾಸಿಸ್ ಪಾಯಿಂಟ್ಸ್ ಇಳಿಸಿದೆ.
ಕೆಲ ತಿಂಗಳಲ್ಲಿ ಆರ್ ಬಿಐ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡಿದೆ. ಇದಾದ ಬಳಿಕ ಎಸ್ ಬಿ ಐ ಸೇರಿ ಹಲವು ಬ್ಯಾಂಕುಗಳು ಕೂಡ ಗೃಹ ಸಾಲ ಸೇರಿ ಹಲವು ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಇದರಿಂದ ಗೃಹಸಾಲ ಸೇರಿ ವಿವಿಧ ಸಾಲಗಳ ಮೇಲಿನ ಇಎಂಐ ಹೊರೆ ಇಳಿಕೆಯಾಗಿದೆ. ಇದೇ ಕಾರಣಕ್ಕಾಗಿ ಹಲವು ಬ್ಯಾಂಕುಗಳು ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.