ನವದೆಹಲಿ: ಇತ್ತೀಚೆಗಷ್ಟೇ ಇನ್ಫೋಸಿಸ್(Infosys) ಸಹ ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ದೀರ್ಘಾವಧಿ ಕೆಲಸದ ಬಗ್ಗೆ ಮಾತನಾಡಿದ್ದು, ಅದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೆ ಆ ಕುರಿತು ಮಾತನಾಡಿದ್ದಾರೆ.
ನಾನು ಪ್ರತಿದಿನ ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30ರ ವರೆಗೆ ಕೆಲಸ ಮಾಡುತ್ತಿದ್ದೆ. ಇದು ಆತ್ಮಾವಲೋಕನಕ್ಕೆ(introspection) ಸಂಬಂಧಿಸಿದ ವಿಷಯ. ಆದರೆ, ಯಾರೂ ದೀರ್ಘಾವಧಿ ಕೆಲಸದ ಕುರಿತು ಒತ್ತಡ ಹೇರಬಾರದು ಎಂದಿದ್ದಾರೆ.
ನಾನು 40 ವರ್ಷ ವಯಸ್ಸಿನವನಿದ್ದಾಗ ಇಷ್ಟು ಸಮಯ ಕೆಲಸ ಮಾಡಿದ್ದೇನೆ. ನಾನು ಇಷ್ಟೊಂದು ದೀರ್ಘಾವಧಿಯವರೆಗೆ ಕೆಲಸ ಮಾಡಿರುವುದು ಸತ್ಯ. ನಾನು ಅದನ್ನು ಮಾಡಿದ್ದೇನೆ. ನೀವು ಬಯಸಿದ್ದನ್ನು ನೀವು ಮಾಡಬಹುದು. ಆದರೆ, ನೀವು ಇದನ್ನು ಮಾಡಬೇಕು. ಅದನ್ನು ಮಾಡಬಾರದು ಎಂದು ಯಾರೂ ಹೇಳಿಲ್ಲ ಎಂದು ಹೇಳಿದ್ದಾರೆ.
ದೇಶ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ ಭಾರತದ ಯುವ ಸಮುದಾಯವು ಕಠಿಣ ಪರಿಶ್ರಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಿಂದೆ ನಾರಾಯಣೂರ್ತಿ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೆ ಹಾರ್ಡ್ ವರ್ಕ್(hardwork) ಬಗ್ಗೆ ಮಾತನಾಡಿದ್ದಾರೆ.