ಪಹಲ್ಗಾಮ್‌ನಲ್ಲಿ ನಡೆದ ನರಮೇಧ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ನಿನ್ನೆ ತಡರಾತ್ರಿ ಕಾರ್ಯಾಚರಣೆ ಆರಂಭಿಸಿದ್ದು, ಈಗಾಗಲೇ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. 9ಕ್ಕೂ ಅಧಿಕ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಆದರೆ, ಭಾರತ ಪಾಕಿಸ್ಥಾನದ ವಿರುದ್ಧ ಈ ಪ್ರತೀಕಾರಕ್ಕೆ “ಆಪರೇಷನ್ ಸಿಂಧೂರ್” ಎಂದು ಹೆಸರಿಟ್ಟಿದೆ. ಈ ಕಾರ್ಯಾಚರಣೆಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲು ಕಾರಣವೇ ಈಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲಾರಂಭಿಸಿದೆ.
ಏಪ್ರಿಲ್ 22 ರಂದು ನಡೆದ ದಾಳಿಯಲ್ಲಿ ಉಗ್ರರ ಪಡೆ ಹತ್ಯೆ ಮಾಡಿದ್ದು ಕೇವಲ ಗಂಡಸರನ್ನು ಮಾತ್ರ ಟಾರ್ಗೆಟ್ ಮಾಡಿದ್ದರು. ಭಾರತೀಯ ಸಂಸ್ಕೃತಿ, ಸನಾತನ ಧರ್ಮದಲ್ಲಿ ಹೆಣ್ಣು ಮಕ್ಕಳು ಅವರವರ ಪತಿ ನಿಧನರಾದರೆ, ಹಣೆಯಲ್ಲಿ ಇಡುವ ಸಿಂಧೂರವನ್ನು ತೆಗೆಯುತ್ತಾರೆ. ಭಾರತದ ನಾಗರಿಕರ ಪೈಕಿ 26 ಮಂದಿಯನ್ನು ಹತ್ಯೆ ಮಾಡಿದ ಉಗ್ರರ ದಾಳಿಯಿಂದ ಹೆಣ್ಣು ಮಕ್ಕಳ ಸಿಂಧೂರವನ್ನು ಅಳಿಸಿ ಹಾಕಿದ್ದಾರೆ. ಹೀಗಾಗಿ, ಈ ದಾಳಿಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆ ಎಂದು ಉಲ್ಲೇಖಿಸಲಾಗುತ್ತಿದೆ.



















