ಬೆಂಗಳೂರು | ಬೆಂಗಳೂರಿನ ಹೃದಯ ಭಾಗ ಮಲ್ಲೇಶ್ವರದ ಪ್ರಸಿದ್ಧ ಸ್ಯಾಂಕಿ ಕೆರೆ ಆವರಣದಲ್ಲಿ ಭಾರತದ ಮೊದಲ ಸ್ವಯಂ ಶಕ್ತಿಯಿಂದ ಕಾರ್ಯನಿರ್ವಹಿಸುವ ನೂತನ ‘ಓಪನ್ ಏರ್ ಫಿಟ್ನೆಸ್ ಜಿಮ್’ ನಿರ್ಮಾಣ ಮಾಡಲಾಗಿದೆ.
ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರದ ಬಿಜೆಪಿ ಶಾಸಕ ಡಾ ಸಿ.ಎನ್ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ‘ಓಪನ್ ಏರ್ ಫಿಟ್ನೆಸ್ ಜಿಮ್’ ಬುಧವಾರ (ಏಪ್ರಿಲ್ 8) ಉದ್ಘಾಟನೆಯಾಗಲಿದೆ.
ನಾಳೆ ಬೆಳಗ್ಗೆ 7:30ಕ್ಕೆ ಸ್ಯಾಂಕಿ ಕೆರೆ ಆವರಣದಲ್ಲಿ ಜಿಮ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಂತರಾಷ್ಟ್ರೀಯ ಈಜು ಕ್ರೀಡಾಪಟು ಶ್ರೀಹರಿ ನಟರಾಜನ್ ಅವರು ಚಾಲನೆ ನೀಡಲಿದ್ದಾರೆ.
ಸ್ವಯಂ ಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಜಿಮ್‌ನಲ್ಲಿ ವಿದ್ಯುತ್ ಅವಶ್ಯಕತೆ ಇಲ್ಲದೆ ಆಧುನಿಕ ಫಿಟ್ನೆಸ್ ಉಪಕರಣಗಳನ್ನು ಅಳವಡಿಸಲಾಗಿದ್ದು, ಪರಿಸರ ಸ್ನೇಹಿ ಮಾದರಿಯ ಜಿಮ್ ಇದಾಗಿದೆ. ಈ ಜಿಮ್ ಮೂಲಕ ಯುವಕ-ಯುವತಿಯರು, ಹಿರಿಯರು ಹಾಗೂ ಫಿಟ್ನೆಸ್ ಪ್ರೇಮಿಗಳು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಹೆಚ್ಚು ಪ್ರೋತ್ಸಾಹ ಸಿಗಲಿದೆ. ವ್ಯಾಯಾಮ ಮತ್ತು ಆರೋಗ್ಯ ಕಾಳಜಿಗಾಗಿ ಈ ಓಪನ್ ಏರ್ ಫಿಟ್ನೆಸ್ ಜಿಮ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಇಂದಿನಿಂದ ಮತ್ತಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ – ಶಾಸಕ ಅಶ್ವಥ್ ನಾರಾಯಣ್ ಚಾಲನೆ!



















