ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಈಗಾಗಲೇ ಭಾರತೀಯರ ಅಭಿಯಾನ ಮುಂದುವರೆದಿದೆ. ಆದರೆ, ಪದಕಗಳಿಗೆ ಮಾತ್ರ ಇನ್ನೂ ಕೊರಳು ಒಡ್ಡಲಾಗಿಲ್ಲ. ಪದಕ ಗೆಲ್ಲುವ ಅವಕಾಶ ಕಳೆದುಕೊಂಡರೂ ಬ್ಯಾಡ್ಮಿಂಟನ್, ಶೂಟಿಂಗ್ ಹಾಗೂ ಹಾಕಿಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇಂದು ಕೂಡ ಅದೇ ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿದೆ.
ಭಾರತದ ಮನು ಭಾಕರ್ ಶೂಟಿಂಗ್ ನಲ್ಲಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಹಲವಾರು ಕ್ರೀಡಾಪಟುಗಳು ತಮ್ಮ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಜುಲೈ 28ರಂದು ಕೂಡ ಇದೇ ರೀತಿ ಅಭಿಯಾನ ಮುಂದುವರೆಸಲು ಸನ್ನದ್ಧರಾಗಿದ್ದಾರೆ.
• 12:00 PM – ಶೂಟಿಂಗ್ – 10 ಮೀ ಏರ್ ರೈಫಲ್ ಮಹಿಳೆಯರ ಅರ್ಹತಾ ಸುತ್ತು – ಎಲವೆನಿಲ್ ವಲರಿವನ್/ರಮಿತಾ ಜಿಂದಾಲ್
• 1:06 PM – ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ರೆಪೆಚೇಜಸ್ – ಬಲರಾಜ್ ಪನ್ವಾರ್
• 12:50 PM ಬಳಿಕ – ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ ಗುಂಪು ಹಂತ – ಪಿವಿ ಸಿಂಧು vs ಫಾತಿಮತ್ ನಬಾಹಾ ಅಬ್ದುಲ್ ರಜಾಕ್ (ಮಾಲ್ಡೀವ್ಸ್)
• 2:15 PM – ಟೇಬಲ್ ಟೆನಿಸ್ – 64 ರ ಮಹಿಳಾ ಸಿಂಗಲ್ಸ್ ರೌಂಡ್ – ಶ್ರೀಜಾ ಅಕುಲಾ vs ಕ್ರಿಸ್ಟಿನಾ ಕಾಲ್ಬರ್ಗ್ (ಸ್ವೀಡನ್)
• 2:45 PM – ಶೂಟಿಂಗ್ – 10 ಮೀ ಏರ್ ರೈಫಲ್ ಪುರುಷರ ಅರ್ಹತಾ ಸುತ್ತು – ಸಂದೀಪ್ ಸಿಂಗ್/ಅರ್ಜುನ್ ಬಾಬುತಾ
• 3:00 PM – ಟೇಬಲ್ ಟೆನಿಸ್ – ಶರತ್ ಕಮಲ್ vs ಡೆನಿ ಕೊಜುಲ್ (ಸ್ಲೊವೇನಿಯಾ)
• 3:13 PM – ಈಜು – ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್ – ಶ್ರೀಹರಿ ನಟರಾಜ್
• 3:30 PM – ಈಜು – ಮಹಿಳೆಯರ 200 ಮೀ ಫ್ರೀಸ್ಟೈಲ್ ಹೀಟ್ಸ್ – ಧಿನಿಧಿ ದೇಸಿಂಗು
• 3:30 PM – ಶೂಟಿಂಗ್ – 10 ಮೀ ಏರ್ ಪಿಸ್ತೂಲ್ ಮಹಿಳೆಯರ ಫೈನಲ್ – ಮನು ಭಾಕರ್ (ಚಿನ್ನದ ಪದಕ ಸ್ಪರ್ಧೆ)
• 3:50 PM – ಬಾಕ್ಸಿಂಗ್ – ಮಹಿಳೆಯರ 50 ಕೆಜಿ ರೌಂಡ್ ಆಫ್ 32 – ನಿಖಾತ್ ಝರೀನ್ vs ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ (ಜರ್ಮನಿ)
• 4:30 PM – ಟೇಬಲ್ ಟೆನಿಸ್ – ಮನಿಕಾ ಬಾತ್ರಾ vs ಅನ್ನಾ ಹರ್ಸೆ (ಗ್ರೇಟ್ ಬ್ರಿಟನ್)
• 5:45 PM – ಬಿಲ್ಲುಗಾರಿಕೆ – ಮಹಿಳೆಯರ ತಂಡ ಕ್ವಾರ್ಟರ್‌ಫೈನಲ್ (ದೀಪಿಕಾ ಕುಮಾರಿ, ಭಜನ್ ಕೌರ್, ಅಂಕಿತಾ ಭಕತ್)
• 7:17 PM ಬಳಿಕ – ಬಿಲ್ಲುಗಾರಿಕೆ – ಮಹಿಳಾ ತಂಡ ಸೆಮಿಫೈನಲ್ – (ಅರ್ಹತೆಯ ನಂತರ)
• 8:00 PM ಬಳಿಕ – ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗುಂಪು ಹಂತ – ಪ್ರಣಯ್ vs ಫ್ಯಾಬಿಯನ್ ರಾತ್ (ಜರ್ಮನಿ)
• 8:18 PM – ಬಿಲ್ಲುಗಾರಿಕೆ – ಮಹಿಳಾ ತಂಡದ ಕಂಚಿನ ಪದಕದ ಪಂದ್ಯ – (ಅರ್ಹತೆಯ ನಂತರ)
• 8:41 PM – ಬಿಲ್ಲುಗಾರಿಕೆ – ಮಹಿಳಾ ತಂಡದ ಚಿನ್ನದ ಪದಕದ ಪಂದ್ಯ – (ಅರ್ಹತೆಯ ನಂತರ)
• 10:30 PM – ಟೇಬಲ್ ಟೆನಿಸ್ – ರೌಂಡ್ ಆಫ್ 64 – ಹರ್ಮೀತ್ ದೇಸಾಯಿ vs ಫೆಲಿಕ್ಸ್ ಲೆಬ್ರುನ್ (ಫ್ರಾನ್ಸ್) ಈ ಆಟಗಾರರು ಇಂದು ತಮ್ಮ ಅಭಿಯಾನ ಮುಂದುವರೆಸಲಿದ್ದಾರೆ.