ದುಬೈ : 29 ವರ್ಷದ ಭಾರತೀಯ ಪ್ರಜೆ ಮತ್ತು ದೀರ್ಘಕಾಲದಿಂದ ಅಬುಧಾಬಿಯಲ್ಲಿ ನೆಲೆಸಿರುವ ಆಂಧ್ರ ಮೂಲದ ಅನಿಲ್‌ಕುಮಾರ್ ಬೊಲ್ಲಾ ಎಂಬಾತನ ಭವಿಷ್ಯವೇ ಬದಲಾಗಿದೆ. ಅದಕ್ಕೆ ಕಾರಣವಾಗಿದ್ದು ಆತ ತಾಯಿಯ ಹುಟ್ಟುಹಬ್ಬದ ದಿನ. ಹೌದು… ಅಕ್ಟೋಬರ್ 18ರ ಶನಿವಾರ ನಡೆದ ಯುಎಇ ಲಾಟರಿಯ 23ನೇ ಲಕ್ಕಿ ಡೇ ಡ್ರಾ #251018 ರಲ್ಲಿ 100 ಮಿಲಿಯನ್ ದಿರಾಮ್ (240 ಕೋಟಿ) ಗೆದ್ದು, ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.
ಯುಎಇ ಲಾಟರಿ ತನ್ನ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಅನಿಲ್ ಕುಮಾರ್ ಗೆದ್ದ ಸಂತೋಷದ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ ಅವರಿಗೆ ಚಿನ್ನದ ಕಾನ್ಫೆಟ್ಟಿ ಹಾರಿಸಿ ಸಾಂಪ್ರದಾಯಿಕ ಚೆಕ್ ನೀಡುವ ದೃಶ್ಯಗಳು ಕಾಣಿಸುತ್ತವೆ. “ಅಕ್ಟೋಬರ್ 18 ನನ್ನ ಜೀವನವನ್ನು ಸಂಪೂರ್ಣ ಬದಲಾಯಿಸಿದ ದಿನವಾಗಿದೆ” ಎಂದು ಅನಿಲ್ ಕುಮಾರ್ ಸಂತೋಷದಿಂದ ಹೇಳಿದ್ದಾರೆ.
ಅನಿಲ್ ಕುಮಾರ್ ತಮ್ಮ ಲಾಟರಿ ಟಿಕೆಟ್ ಆಯ್ಕೆ ಮಾಡಿದ ಕಥೆಯನ್ನು ಹಂಚಿಕೊಂಡು, “ನಾನು ಯಾವುದೇ ಮಾಯಾಜಾಲ ಮಾಡಿಲ್ಲ. ಸುಲಭ ‘ಈಸಿ ಪಿಕ್’ ಆಯ್ಕೆ ಮಾಡಿದೆ. ಕೊನೆಯ ಸಂಖ್ಯೆ ನನ್ನ ತಾಯಿಯ ಹುಟ್ಟುಹಬ್ಬದ ದಿನಾಂಕ,” ಎಂದಿದ್ದಾರೆ. ಗೆಲುವಿನ ಕ್ಷಣವನ್ನು ವಿವರಿಸುತ್ತಾ ಅವರು, “ನಾನು ಸೋಫಾ ಮೇಲೆ ಕುಳಿತುಕೊಂಡಿದ್ದೆ. ಗೆದ್ದಿದ್ದು ನನಗೆ ನಂಬಲಾಗಲಿಲ್ಲ” ಎಂದು ಹೇಳಿದ್ದಾರೆ.
ಸದ್ಯ ಅನಿಲ್ ಕುಮಾರ್ ತಮ್ಮ ಬಹುಮಾನವನ್ನು ಜವಾಬ್ದಾರಿತ್ವದಿಂದ ಬಳಸಲು ಯೋಜಿಸುತ್ತಿದ್ದಾರೆ. “ಈ ಹಣವನ್ನು ಹೇಗೆ ಹೂಡಿಕೆ ಮಾಡಬೇಕು, ಹೇಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಈಗ ನನಗೆ ನನ್ನ ಆಲೋಚನೆಗಳ ಮೇಲೆ ಸರಿಯಾಗಿ ಕಾರ್ಯನಿರ್ವಹಿಸಬೇಕು,” ಅವರು ಐಷಾರಾಮಿ ಆಸೆಗಳನ್ನು ತೃಪ್ತಿ ಪಡಿಸಲು ಬಯಸಿದ್ದರೂ, ಕುಟುಂಬ ಮತ್ತು ಪ್ರಿಯ ವ್ಯಕ್ತಿಗಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮುಖ್ಯ ಎಂದು ಹೇಳಿದ್ದಾರೆ. “ನಾನು ನನ್ನ ಕುಟುಂಬವನ್ನು ಯುಎಇಗೆ ಕರೆತರುವೆ ಮತ್ತು ಅವರೊಂದಿಗೆ ಜೀವನವನ್ನು ಆನಂದಿಸುತ್ತೇನೆ,” ಎಂದು ಅನಿಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ‘ಮೊಂಥಾ’ ಸೈಕ್ಲೋನ್ ಅಬ್ಬರ | ವೈಜಾಗ್ ವಿಮಾನ ನಿಲ್ದಾಣದ 32 ವಿಮಾನಗಳು ರದ್ದು!



















