ಭಾರತೀಯ ಮಹಿಳಾ ತಂಡವು ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧ ಕಣಕ್ಕೆ ಇಳಿಯಲು ಸಜ್ಜಾಗಿದೆ. ಈ ಟೂರ್ನಿಗಾಗಿ ವೇಳಾಪಟ್ಟಿ ಪ್ರಕಟವಾಗಿದೆ.
ಭಾರತವೇ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ. ಮೊದಲು ಭಾರತ ತಂಡವು ವೆಸ್ಟ್ ಇಂಡೀಸ್ ಜೊತೆ ಸರಣಿ ಆಡಲಿದ್ದು, ಆನಂತರ ಐರ್ಲೆಂಡ್ ಸವಾಲು ಎದುರಿಸಲಿದೆ.
ವೆಸ್ಟ್ ಇಂಡೀಸ್ ತಂಡ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಬರೋಡಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಮತ್ತು ಮೂರನೇ ಪಂದ್ಯ ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಟಿ20 ಸರಣಿ ವೇಳಾಪಟ್ಟಿ
ಭಾರತ vs ವೆಸ್ಟ್ ಇಂಡೀಸ್, ಮೊದಲನೇ ಟಿ20 – 15 ಡಿಸೆಂಬರ್
ಭಾರತ vs ವೆಸ್ಟ್ ಇಂಡೀಸ್, 2ನೇ ಟಿ20 – 17 ಡಿಸೆಂಬರ್
ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20 – 19 ಡಿಸೆಂಬರ್
ಏಕದಿನ ಸರಣಿ ವೇಳಾಪಟ್ಟಿ
ಭಾರತ vs ವೆಸ್ಟ್ ಇಂಡೀಸ್, ಮೊದಲನೇ ಏಕದಿನ ಪಂದ್ಯ – 22 ಡಿಸೆಂಬರ್
ಭಾರತ vs ವೆಸ್ಟ್ ಇಂಡೀಸ್, 2ನೇ ಏಕದಿನ ಪಂದ್ಯ – 24 ಡಿಸೆಂಬರ್
ಭಾರತ vs ವೆಸ್ಟ್ ಇಂಡೀಸ್, ಮೂರನೇ ಏಕದಿನ ಪಂದ್ಯ – 27 ಡಿಸೆಂಬರ್
ನಂತರ ಭಾರತ ತಂಡವು ಐರ್ಲೆಂಡ್ ವಿರುದ್ಧ ಜನವರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಟೂರ್ನಿಗಳು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿವೆ. .
ಭಾರತ vs ಐರ್ಲೆಂಡ್ ಮೊದಲನೇ ಏಕದಿನ – 10 ಜನವರಿ
ಭಾರತ vs ಐರ್ಲೆಂಡ್ 2ನೇ ಏಕದಿನ – 12 ಜನವರಿ
ಭಾರತ vs ಐರ್ಲೆಂಡ್ 3ನೇ ಏಕದಿನ – 15 ಜನವರಿ