19 ವರ್ಷದೊಳಗಿನವರ ಏಷ್ಯಾ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ಸೋಲಿಸಲು ಮೂಲಕ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 173 ರನ್ ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 22 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 67 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶ್ರೀಲಂಕಾದ ಆರಂಭಿಕ ಆಟಗಾರ ಪುಲಿಂದು ಪೆರೆರಾ ಅವರನ್ನು ಬೇಗನೆ ಔಟ ಮಾಡುವ ಮೂಲಕ ಭಾರತೀಯ ಬೌಲರ್ ಗಳು ಶ್ರೀಲಂಕಾ ತಂಡವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಆರಂಭಿಕ ಹಿನ್ನಡೆಯ ನಂತರ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಾದ ಶರುಜನ್ ಷಣ್ಮುಗನಾಥನ್ ಮತ್ತು ಲವ್ಕಿನ್ ಅಬೆಸಿಂಘೆ ಶ್ರೀಲಂಕಾದ ಇನ್ನಿಂಗ್ಸ್ ನಿಭಾಯಿಸಿ ನಾಲ್ಕನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನೀಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ನಿಧಾನವಾಗಿ ಅರ್ಧ ಶತಕ ಸಿಡಿಸಿದರು.
ನಂತರ ಲವ್ಕಿನ್ ಭಾರತದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದರು. ಪರಿಣಾಮವಾಗಿ ಶ್ರೀಲಂಕಾ ತಂಡವು 46.2 ಓವರ್ಗಳಲ್ಲಿ 173 ರನ್ ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿತು. ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಭಾರತಕ್ಕೆ ಆಕ್ರಮಣಕಾರಿ ಆರಂಭ ನೀಡಿದರು.ಈ ಜೋಡಿ 91 ರನ್ ಗಳ ಜೊತೆಯಾಟ ನೀಡಿತು. ಹೀಗಾಗಿ ಭಾರತ 12 ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್‌ಗೆ 121 ರನ್ ಗಳಿಸಿತು. 13 ವರ್ಷದ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ ವೇಗದ ಅರ್ಧಶತಕ ಪೂರೈಸಿದರು. ನಂತರ 36 ಎಸೆತಗಳಲ್ಲಿ 67 ರನ್ಗಳ ಬಿರುಸಿನ ಆಟವಾಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 6 ಬೌಂಡರಿ ಹಾಗೂ ಐದು ಸಿಕ್ಸರ್ ಸಿಡಿಸಿದರು.