ಕೊಲಂಬೊ: ಶ್ರೀಲಂಕಾ ವಿರುದ್ಧ ಕೊನೆಯಲ್ಲಿ 1 ರನ್ ಗಳಿಸಲು ವಿಫಲವಾದ ಭಾರತ ಪಂದ್ಯ ಡ್ರಾ ಮಾಡಿಕೊಂಡಿದೆ.
ರೋಚಕತೆಯಿಂದ ಕೂಡಿದ್ದ ಭಾರತ-ಶ್ರೀಲಂಕಾ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ರೋಚಕವಾಗಿಯೇ ಟೈ ಆಗಿದೆ. ಗೆಲುವಿಗೆ ಬೇಕಿದ್ದ 1 ರನ್ ಗಳಿಸುವಲ್ಲಿ ಭಾರತ ತಂಡದ ಆಟಗಾರರು ವಿಫಲವಾಗಿ ಪಂದ್ಯ ಟೈ ಆಗುವಂತೆ ಮಾಡಿದ್ದಾರೆ. ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಶ್ರೀಲಂಕಾ ತಂಡವು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 47.5 ಓವರ್ ಗಳಲ್ಲಿ 230 ರನ್ ಗಳಿಸಿ ಗೆಲುವು ದಾಖಲಿಸಲು ಆಗದೆ ಡ್ರಾ ಮಾಡಿಕೊಂಡಿದೆ.
ಕೊನೆಯಲ್ಲಿ ಭಾರತದ ಗೆಲುವಿಗೆ 14 ಬೌಲ್ ಗಳಲ್ಲಿ ಕೇವಲ 1 ರನ್ ಬೇಕಿತ್ತು. ಶಿವಂ ದುಬೆ ತಂಡವನ್ನು ದಡ ಸೇರಿಸಬಹುದು ಎಂದು ಎಲ್ಲರೂ ಭಾವಸಿದ್ದರು. ಆದರೆ, ಎಲ್ ಬಿ ಆಗುವುದರ ಮೂಲಕ ನಿರಾಸೆ ಮೂಡಿಸಿದರು. ಅಕ್ಷರ್ ಪಟೇಲ್ ಕೂಡ ಎಲ್ ಬಿಡಬ್ಲ್ಯೂ ಆದರು. ಹೀಗಾಗಿ ಭಾರತ ತಂಡ ಭಾರತ ತಂಡ ಆಲೌಟ್ ಆಗಿ ಪಂದ್ಯ ಟೈ ಆಗುವಂತೆ ಮಾಡಿಕೊಂಡಿತು.
ಭಾರತದ ಪರ ರೋಹಿತ್ ಶರ್ಮಾ 58, ಶುಭಮನ್ ಗಿಲ್ 16, ವಿರಾಟ್ ಕೊಹ್ಲಿ 23, ಕೆ.ಎಲ್. ರಾಹುಲ್ 31, ಅಕ್ಷರ್ ಪಟೇಲ್ 33, ಶಿವಂ ದುಬೆ 25 ರನ್ ಗಳಿಸಿದರು. ಶ್ರೀಲಂಕಾ ಪರ ವನಿಂದು ಹಸರಂಗ, ಚರಿತ್ ಅಸಲಂಕಾ ತಲಾ 3 ವಿಕೆಟ್ ಕಬಳಿಸಿದರು. ದುನಿತ್ ವೆಲ್ಲಲಾಗೆ 2 ಹಾಗೂ ಅಸಿತ ಫೆರ್ನಾಂಡೋ, ಅಕಿಲ ದನಂಜಯ ತಲಾ 1 ವಿಕೆಟ್ ಪಡೆದು ಮಿಂಚಿದರು.
ದುನೀತ್ ವೆಲ್ಲಲಾಗೆ 67, ಪಾತುಂ ನಿಸ್ಸಾಂಕ 56 ರನ್ ಗಳಿಸಿ ತಂಡಕ್ಕೆ ಹೆಚ್ಚಿನ ರನ್ ಬರಲು ಕಾರಣರಾದರು.