ವಿಶ್ವ ಭೂಪಟದಿಂದ ಪಾಕಿಸ್ತಾನವೇ ಮಾಯವಾಗುವ ಕಾಲ ಸನ್ನಿಹಿತವಾಗ್ತಿದೆ. ಕ್ಷಣಕ್ಷಣಕ್ಕೂ ಪರಮಪಾಪಿಗಳು ತಮ್ಮದೇ ಗೋರಿಗೆ ಹತ್ತಿರವಾಗ್ತಿದ್ದಾರೆ. ಒಂದೇ ಏಟಿಗೆ ಎಲ್ಲವನ್ನೂ ಮುಗಿಸಿ ಸಮಾಧಿ ಮಾಡುವ ರಣೋತ್ಸಾಹದಲ್ಲಿ ಭಾರತವೂ ಮುನ್ನುಗುತ್ತಿದೆ. ಹೌದು! ಭಾರತದ ಮೇಲೆ ನೂರಾರು ಆತ್ಮಾಹುತಿ ಡ್ರೋನ್ ಗಳನ್ನು ಹಾರಿಬಿಟ್ಟ ಪಾಕ್ ಅದಕ್ಕೆ ತಕ್ಕ ಪ್ರತಿಫಲ ಉಂಡಿದೆ. ತನ್ನ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಲಾಹೋರ್, ರಾವಲ್ಪಿಂಡಿ, ಕರಾಚಿ ನಗರಗಳು ಇನ್ನೇನು ಪಳೆಯುಳಿಕೆಗಳಾಗೋದೊಂದೇ ಬಾಕಿ.
ಮಿಡ್ ನೈಟ್ ಕ್ಷಿಪಣಿ ದಾಳಿಗೆ ಇಸ್ಲಾಮಾಬಾದ್ ಊಸ್ಟ್
ಡ್ರೋನ್ ದಾಳಿಗೆ ಪ್ರತ್ಯುತ್ತರ ಆರಂಭಿಸಿದ್ದ ಭಾರತದ ಮೊದಲ ಟಾರ್ಗೆಟ್ ಇಸ್ಲಾಮಾಬಾದ್ ಆಗಿತ್ತು. ಪಾಕ್ ರಾಜಧಾನಿಯಲ್ಲಿರುವ ಅತ್ಯಂತ ಸುರಕ್ಷಿತ, ಹೈಸೆಕ್ಯೂರಿಟಿ ಝೋನ್ ಕ್ಷೇತ್ರ ಅಂತಲೇ ಕರೆಯಿಸಿಕೊಳ್ಳುವ ನೂರ್ ಖಾನ್ ಏರ್ ಬೇಸ್ ನ್ನೇ ಚಿಂದಿ ಉಡಾಯಿಸಲಾಗಿದೆ. ಪಾಕ್ ನ ಬಲು ದೊಡ್ಡ ಏರ್ ಬೇಸ್ ಮತ್ತು ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅಂತಲೇ ಮೀಸಲಿರುವ ನೂರ್ ಖಾನ್ ಏರ್ಬೇಸ್ ಚಕ್ ಲಾಲಾ ವಾಯುನೆಲೆ ಅಂತಲೇ ಖ್ಯಾತಿ ಪಡೆದಿದೆ.
ಇಂಥಾ ತಾಣವನ್ನೇ ಕ್ಷಿಪಣಿಗಳ ಮೂಲಕ ಉಡಾಯಿಸಿರೋ ಭಾರತ ಪಾಕ್ ನ ಭುಜಬಲ ಪರಾಕ್ರಮವನ್ನೇ ತುಂಡರಿಸಿಬಿಟ್ಟಿದೆ. ಇತ್ತ ಕರಾಚಿಯ ನೌಕಾನೆಲೆಯನ್ನೂ ಹಿಟ್ ಲಿಸ್ಟ್ ಗೆ ಸೇರಿಸಿಕೊಂಡ ಭಾರತ, ಜಲದಾಳಿಗಿದ್ದ ಪಾಕ್ ನ ಒಂದೇ ಒಂದು ಆಯ್ಕೆಯನ್ನೂ ಇನ್ನಿಲ್ಲದಂತೆ ಉಡಾಯಿಸಿಬಿಟ್ಟಿದೆ.
ರಾವಲ್ಪಿಂಡಿಯಲ್ಲಿ ಆವರಿಸಿದ ನೀರವ ಮೌನ
ಪಾಕ್ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ನಿನ್ನೆ ಭಾರತ ನಡೆಸಿದ ಆಪರೇಷನ್ ಮಿಡ್ ನೈಟ್ ಗೆ ಪಾಕ್ ತತ್ತರ್ ಬಿತ್ತರ್ ಆಗಿ ಹೋಗಿದೆ. ಲಾಹೋರ್ ನ ಅನಾರ್ಕಲಿ ಮಾರ್ಕೆಟ್ ಪ್ರದೇಶದಲ್ಲಿ ಭಾರತದ ಕ್ಷಿಪಣಿ ದಾಳಿ ನಡೆದಿದ್ದು, ನಗರದ ಪ್ರಮುಖ ವಹಿವಾಟು ತಾಣವೇ ಇನ್ನಿಲ್ಲದಂತಾಗಿದೆ. ಇತ್ತ ಮೊನ್ನೆಯೇ ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂನ್ನು ಉಡಾಯಿಸಿದ್ದ ಭಾರತ ನಿನ್ನೆ ಇಲ್ಲಿನ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ದಾಳಿ ಮಾಡಿದೆ.
ಈ ನಡುವೆ, ಭಾರತದ ಶ್ರೀನಗರ ಮತ್ತು ಜಮ್ಮುವಿನ ಶಂಭು ದೇಗುಲವನ್ನು ಗುರಿಯಾಗಿಸಿ ದಾಳಿಗೆ ಹಾರಿ ಬಂದಿದ್ದ ಪಾಕಿಸ್ತಾನದ 2 ಫೈಟರ್ ಜೆಟ್ ಗಳನ್ನು ಸೇನೆ ಉಡಾಯಿಸಿದೆ. ಆಕಾಶ್ ಏರ್ ಡಿಫೆನ್ಸ್ ಆರ್ಭಟಕ್ಕೆ ಪತರಗುಟ್ಟಿದ ಫೈಟರ್ ಜೆಟ್ ಗಳು ಬಾನಲ್ಲೇ ಸುಟ್ಟು ಕರಕಲಾಗಿವೆ.
ಮುರ್ಡಿ, ರಫೀಕಿ ಏರ್ ಬೇಸ್ ಗಳೂ ಛಿದ್ರಛಿದ್ರ ವಾಯು ಸಂಚಾರ ಸ್ತಬ್ಧಗೊಳಿಸಿ ಪಾಕ್ ಆದೇಶ
ಪಾಕಿಸ್ತಾನದ ನೂರ್ ಖಾನ್ ಏರ್ ಬೇಸ್ ಮಾತ್ರವಲ್ಲ, ಚಕ್ ವಾಲಾದಲ್ಲಿರುವ ಮುರ್ಡಿ ಏರ್ ಬೇಸ್ ಮತ್ತು ಪಾಕ್ ನ ಪಂಜಾಬ್ ಪ್ರಾಂತ್ಯದ ಲಂಗ್ ಜಿಲ್ಲೆಯ ರಫೀಕಿ ಏರ್ ಬೇಸ್ ಕೂಡಾ ಈಗ ಇನ್ನಿಲ್ಲದಂತೆ ಬರ್ಬಾದ್ ಆಗಿದೆ. ಈ ಮೂಲಕ ಪಾಕಿಸ್ತಾನದ ವಾಯು ಬಲ ಮತ್ತು ಕರಾಚಿಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ನೌಕಾ ಬಲವನ್ನು ತುಂಡರಿಸಿ ಹಾಕಲಾಗಿದೆ. ಹೀಗಾಗಿ ಪಾಕ್ ಈಗ ಹಲ್ಲುಕಿತ್ತ ಹಾವಿನಂತಾಗಿದೆ. ಈ ನಡುವೆ, ಏರ್ ಬೇಸ್ ಗಳು ಚಿಂದಿಯಾಗ್ತಿದ್ದಂತೆ ಪಾಕಿಸ್ತಾನ ತನ್ನೆಲ್ಲಾ ವಾಯುನೆಲೆಗಳಿಂದ ವಿಮಾನಸಂಚಾರವನ್ನು ನಿರ್ಬಂಧಿಸಿ ಆದೇಶಹೊರಡಿಸಿದೆ.



















