ನವದೆಹಲಿ: ಲಡಾಖ್ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ-ಚೀನಾ 23ನೇ ಸುತ್ತಿನ ಮಾತುಕತೆ ಆಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ – ಚೀನಾ ಕಾರ್ಪ್ಸ್ ಕಮಾಂಡರ್ಗಳು ಅಕ್ಟೋಬರ್ 25 ರಂದು ಚುಶುಲ್ – ಮೋಲ್ಡೊ ಗಡಿಯಲ್ಲಿ 23ನೇ ಸುತ್ತಿನ ಮಾತುಕತೆ ನಡೆಸಿದರು. ಆಗಸ್ಟ್ 19 ರಂದು ನಡೆದ ವಿಶೇಷ ಪ್ರತಿನಿಧಿಗಳ ಮಾತುಕತೆಯ ನಂತರದ ಬೈಠಕ್ ಇದಾಗಿದೆ ಎಂದು ಹೇಳಿದೆ.
ಮಾತುಕತೆಗಳು ಸ್ನೇಹಪರ ಮತ್ತು ಸೌಹಾರ್ದಯುತವಾಗಿ ನಡೆದವು. 2024ರ ಅ.ನಲ್ಲಿ ನಡೆದ 22ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ ನಂತರದ ಪ್ರಗತಿಯನ್ನು ಎರಡೂ ಕಡೆಯವರು ಗಮನಿಸಿದರು. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಲಾಗಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು. ಸ್ಥಿರತೆ ಕಾಪಾಡಿಕೊಳ್ಳಲು ಗಡಿಯಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಈಗಿರುವ ಕಾರ್ಯವಿಧಾನಗಳನ್ನು ಬಳಸುವುದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು” ಎಂದು ಎಂಇಎ ತಿಳಿಸಿದೆ.
ಇದನ್ನೂ ಓದಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಡ್ಯಾನಿಶ್ ಚಿಕ್ನಾ ಅರೆಸ್ಟ್!



















