ಬೆಂಗಳೂರು: ಬೆಂಗಳೂರಿನಲ್ಲೇ ಒಳ್ಳೆಯ ಸಂಬಳ ಬರುವ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ಲಭಿಸಿದೆ. ಕರ್ನಾಟಕದ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಖಾಲಿ (IISc Recruitment 2025) ಇರುವ 2 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಐಐಎಸ್ಸಿಯಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಂತಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್
ಹುದ್ದೆಗಳ ಹೆಸರು: ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್
ಒಟ್ಟು ಹುದ್ದೆಗಳು: 02
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಎಂಬಿಬಿಎಸ್ ಹಾಗೂ ಪಿಎಚ್.ಡಿ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ನೇಮಕಾತಿ ಹೊಂದಿದವರಿಗೆ ಮಾಸಿಕ 78 ಸಾವಿರ ರೂಪಾಯಿವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ iisc.ac.in ಗೆ ಭೇಟಿ ನೀಡಬೇಕು
- ಸಿಸ್ಟಮ್ ಎಂಜಿನಿಯರ್ ಹುದ್ದೆಯ ಅಧಿಸೂಚನೆಯನ್ನು ಓದಬೇಕು
- ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು.
- ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದ ರೀತಿ ಭರ್ತಿ ಮಾಡಬೇಕು
- ಅರ್ಜಿಯ ಜತೆಗೆ ಅಗತ್ಯ ದಾಖಲೆಗಳನ್ನು rajeev@iisc.ac.in (ಪ್ರಾಜೆಕ್ಟ್ ಮ್ಯಾನೇಜರ್) ಹಾಗೂ abhiknc@iisc.ac.in ವಿಳಾಸಕ್ಕೆ ಇ-ಮೇಲ್ ಮಾಡಬೇಕು.
ಇದನ್ನೂ ಓದಿ : 3 ವರ್ಷ FD ಇರಿಸಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ಈ ಬ್ಯಾಂಕ್‌ಗಳ ಬಡ್ಡಿ ಹೆಚ್ಚು



















