ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ಬೌಲರ್‌ಗಳನ್ನು ಬಗ್ಗು ಬಡಿದ ಹೆಡ್, ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದರು. ಅಲ್ಲದೇ, ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಸ್ಫೋಟಕ ಸಿಕ್ಸ್ ಸಿಡಿಸಿದರು.
ಪವರ್ ಪ್ಲೇ 5 ನೇ ಓವರ್ ನ್ನು ಜೋಫ್ರಾ ಆರ್ಚರ್ ಬೌಲ್ ಮಾಡಿದ್ದರು. ಇದು ಪಂದ್ಯದಲ್ಲಿ ಅವರ ಮೊದಲ ಓವರ್ ಆಗಿತ್ತು. ಓವರ್‌ನ ಮೊದಲ ಚೆಂಡನ್ನು ಬೌಂಡರಿಗೆ ಹೊಡೆದರು. ಎರಡನೇ ಎಸೆತದಲ್ಲಿ 105 ಮೀಟರ್ ದೂರಕ್ಕೆ ಬೌಲ್ ಕಳಿಸಿ ಸಿಕ್ಸ್ ಸಿಡಿಸಿದ್ದಾರೆ. ಇದನ್ನು ಕಂಡು ಸ್ವತಃ ಜೋಫ್ರಾ ಆರ್ಚರ್ ಕೂಡ ಶಾಕ್ ಆಗಿ ದಂಗಾಗಿ ನಿಂತರು.
ನಂತರ ಜೋಫ್ರಾ ಆರ್ಚರ್ ತಮ್ಮ ಮೊದಲ ಓವರ್ನಲ್ಲೇ 23 ರನ್ ಗಳನ್ನು ಹರಿಬಿಟ್ಟರು. ಓಪನರ್ಗಳಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭದಲ್ಲಿ 45 ರನ್ ಸೇರಿಸಿದರು. ನಂತರ, ಅವರು ಇಶಾನ್ ಕಿಶನ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಕೇವಲ 39 ಎಸೆತಗಳಲ್ಲಿ 85 ರನ್ ಗಳಿಸಿದರು. ಹೆಡ್ 31 ಎಸೆತಗಳಲ್ಲಿ 216 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 67 ರನ್ ಗಳಿಸಿದರು. ಈ ಪೈಕಿ 9 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಸಿಡಿಸಿದ ಪರಿಣಾಮ ತಂಡ 286 ರನ್ ಗಳಿಸಿತ್ತು. ರಾಜಸ್ಥಾನ್ ತಂಡ 44 ರನ್ ಗಳಿಂದ ಸೋಲು ಕಂಡಿತು.