ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಎಂಬುವುದನ್ನು ಅಂಕಿ- ಅಂಶ ಸಾಬೀತು ಮಾಡಿದೆ.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮಹಿಳೆಯರು 4 ನಿಗಮದ ಸಾರಿಗೆಯಲ್ಲೂ ಭರ್ಜರಿ ಓಡಾಟ ನಡೆಸುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ 400 ಕೋಟಿ ಗೂ. ಅಧಿಕ ಮಹಿಳೆಯರು ಓಡಾಟ ನಡೆಸಿದ್ದಾರೆ. ಅಂಕಿ – ಅಂಶದ ಪ್ರಕಾರ 2023ರ ಜೂನ್ 11ರಂದು ಜಾರಿಯಾಗಿದ್ದ ಶಕ್ತಿ ಯೋಜನೆಯಡಿ 2025ರ ಫೆ. 24ರ ವರೆಗೆ 400,00,28,623 ಜನ ಮಹಿಳೆಯರು ಓಡಾಟ ನಡೆಸಿದ್ದಾರೆ. ಈ ಮಹಿಳೆಯರು ಮಹಿಳೆಯರು ಓಡಾಟ ನಡೆಸಿದ ಟಿಕೆಟ್ ಮೌಲ್ಯ ಬರೋಬ್ಬರಿ 9 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ. 11 ಜೂನ್ 2023ರಿಂದ 24ಫೆಬ್ರವರಿ ಮಹಿಳೆಯರು ಓಡಾಡಿದ ಟಿಕೆಟ್ ಮೌಲ್ಯ 9803,87,63,754 ರೂ. ಆಗಿದೆ.