ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯು ಈಗ ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಭಾರತ ತಂಡ ಸೇರಿದಂತೆ ನಾಲ್ಕು ತಂಡಗಳು ಈಗ ಸೆಮಿಫೈನಲ್ ನಲ್ಲಿ ಸೆಣಸಾಟ ನಡೆಸಲಿವೆ.
ಈ ಟೂರ್ನಿಯಲ್ಲಿ 8 ತಂಡಗಳು ಸೆಣಸಾಟ ನಡೆಸಿದ್ದವು. ಈಗಾಗಲೇ ನಾಲ್ಕು ತಂಡಗಳು ಹೊರ ಬಿದ್ದಿದ್ದು, ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ತಲುಪಿವೆ. ಗ್ರೂಪ್-A ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಭಾರತ ತಂಡವು ಸೆಮಿಫೈನಲ್ ತಲುಪಿದ್ದರೆ, ದ್ವಿತೀಯ ಸ್ಥಾನದೊಂದಿಗೆ ಪಾಕಿಸ್ತಾನ್ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿದೆ.
ಗ್ರೂಪ್-B ಅಂಕಪಟ್ಟಿಯಲ್ಲಿ ಶ್ರೀಲಂಕಾ ತಂಡವು ಮೊದಲ ಸ್ಥಾನ ಅಲಂಕರಿಸಿದರೆ, ಬಾಂಗ್ಲಾದೇಶ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ನಾಲ್ಕು ತಂಡಗಳು ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿವೆ.
ಜುಲೈ 26 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಈ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಭಾರತ ತಂಡದ ಎದುರಾಳಿಯಾಗಿ ಬಾಂಗ್ಲಾದೇಶ್ ಕಣಕ್ಕೆ ಇಳಿಯಲಿದೆ. ದ್ವಿತೀಯ ಸೆಮಿಪೈನಲ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡಗಳು ಪೈಪೋಟಿ ನಡೆಸಲಿವೆ.
ಜುಲೈ 26: ಭಾರತ vs ಬಾಂಗ್ಲಾದೇಶ್ (ದಂಬುಲ್ಲಾ ರಂಗಿರಿ ಸ್ಟೇಡಿಯಂ )
ಜುಲೈ 26: ಶ್ರೀಲಂಕಾ vs ಪಾಕಿಸ್ತಾನ್ (ದಂಬುಲ್ಲಾ ರಂಗಿರಿ ಸ್ಟೇಡಿಯಂ) ನಲ್ಲಿ ಸೆಮಿಪೈನಲ್ ಪಂದ್ಯ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಸೆಮಿಫೈನಲ್ ಪಂದ್ಯವು ನಾಳೆ ಮಧ್ಯಾಹ್ನ 2ಕ್ಕೆ ನಡೆಯಲಿದೆ.
ಭಾರತ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ತನುಜಾ ಕನ್ವರ್, ಸಜನಾ ಸಜೀವನ್ ಸ್ಥಾನ ಪಡೆದಿದ್ದಾರೆ.