ಕೊಡಗು: ಹನಿಟ್ರ್ಯಾಪ್ ಗೆ ಕಾಂಗ್ರೆಸ್ ನೇರ ಹೊಣೆ ಎಂಬ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
ಬಿಜೆಪಿಯವರೇ ಹೇಳಿದ್ದಾರೆ. ಆರ್. ಆಶೋಕ್ , ಯಡಿಯೂರಪ್ಪ ಅವರದು ಏನ್ ಆಯ್ತು ಅಂತ ಹೇಳಿದ್ದಾರಲ್ಲ. ಅವರ ನೋವನ್ನ ಅವರು ಹೇಳಿಕೊಂಡಿದ್ದಾರೆ ಮಾಡಿದುಣ್ಣೋ ಮಾರಯ ಅಂತ ತಾವೇ ಅನುಭವಿಸುತ್ತಿದ್ದಾರೆ.
ಹನಿಟ್ರ್ಯಾಪ್ ಆಗಿದ್ದರೆ ಪೋಲಿಸ್ ಠಾಣೆಗೆ ದೂರು ನೀಡಲಿ. ಹನಿಟ್ರ್ಯಾಪ್ ಸುಮ್ಮನೆ ಆಗುವುದಿಲ್ಲ. ನಾವು ಮಾಡಿದರೆ ಮಾತ್ರ ಹನಿಟ್ರ್ಯಾಪ್ ಆಗುತ್ತದೆ. ಹಲೋ ಅಂದ್ರೆ ಅವರು ಹಲೋ ಅಂತಾರೆ. ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ. ನಾವು ಬೇರೆಯರಿಗೆ ವಿಶ್ ಮಾಡಿ ಮಾತನಾಡಿಸಿದ್ರೆ ಅವರು ವಿಶ್ ಮಾಡುತ್ತಾರೆ. ಇಲ್ಲ ಅಂದ್ರೆ ಅವರು ಸುಮ್ಮನಾಗುತ್ತಾರೆ ಎಂದು ಹೇಳಿದ್ದಾರೆ.