ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಕುತಂತ್ರಿ ಪಾಕ್ ತನ್ನ ನರಿ ಬುದ್ಧಿಯನ್ನು ಗಡಿಯಲ್ಲಿ ಪ್ರದರ್ಶಿಸುತ್ತಿದ್ದು, ಭಾರತ ಅದಕ್ಕೆ ತಕ್ಕ ಉತ್ತರ ನೀಡುತ್ತಿದೆ.
ಹೀಗಾಗಿ ಗಡಿಯಲ್ಲಿ ಹೈ ಅಲರ್ಟೋ ಘೋಷಣೆಯಾಗಿದೆ. ಭಾರತ ಪಾಕ್ ಒಳಗೆ ನುಗ್ಗಿ ಹೊಡೆಯುತ್ತಿದೆ. ಮತ್ತೊಮ್ಮೆ ಪಾಕ್ ಗಡಿಯೊಳಗೆ ನುಗ್ಗಿರುವ ಭಾರತ ಲಾಹೋರ್, ಇಸ್ಲಾಮಾಬಾದ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಲ್ಲಿನ ಪ್ರಧಾನಿ ನಿವಾಸದ ಬಳಿಯೇ ಸ್ಫೋಟ ಸಂಭವಿಸಿದ್ದು, ಪ್ರಧಾನಿ ಅಡಗುತಾಣದಲ್ಲ ಅಡಗಿ ಕುಳಿತಿದ್ದಾರೆ.
ಜಮ್ಮು, ಪಂಜಾಬ್, ರಾಜಸ್ಥಾನ ಗುರಿಯಾಗಿಸಿಕೊಂಡು ಪಾಕ್ ದಾಳಿ ನಡೆಸಿದೆ. ಅರಬ್ಬೀ ಸಮುದ್ರದಲ್ಲಿಯೂ ನೌಕಾ ಪಡೆ ದಾಳಿ ಆರಂಭಿಸಿದೆ. ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಹೀಗಾಗಿ ಗಡಿಯಲ್ಲಿ ಅಘೋಷಿತ ಯುದ್ಧ ಆರಂಭವಾಗಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.


















