ಕೊಡಗು : ಜಿಲ್ಲೆಯಾದ್ಯಂತ ಗಾಳಿ ಮಳೆ ಆರ್ಭಟ ಜೋರಾಗಿದೆ. ನದಿಗಳು ಮಳೆಯಿಂದಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಅಂಚಿನಲ್ಲಿ ವಾಸ ಮಾಡುವ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಿರುದಾಲೆ ಗ್ರಾಮದ ಹತ್ತು ಮನೆಗಳ ಕುಟುಂಬಸ್ಥರನ್ನು ಕಾಳಜಿ ಕೇಂದ್ರಕ್ಕೆ ಈಗಾಗಲೇ ತಾಲೂಕು ಆಡಳಿತ ಸ್ಥಳಾಂತರ ಮಾಡಿದೆ.
ಭಾರಿ ಮಳೆಗೆ ಮನೆಯ ಸನಿಹದಲ್ಲೇ ನದಿ ರಭಸವಾಗಿ ಹರಿಯುತ್ತಿದೆ. ಮಳೆ ಆರ್ಭಟ ಮುಂದುವರಿದಿದ್ದರೇ, ಯಾವ ಸಮಯದಲ್ಲಾದರೂ ಮನೆ ಕುಸಿದು ಬೀಳುವ ಆತಂಕವಿತ್ತು. ಈ ನಡುವೆ ಕಾಳಜಿ ಕೇಂದ್ರಕ್ಕೆ ಅವರನ್ನು ಸ್ಥಳಾಂತರ ಮಾಡಲಾಗಿದೆ.

ಮಕ್ಕಳು ವೃದ್ಧರು ಸೇರಿದಂತೆ ಸುಮಾರು 28 ಜನರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಕಿರುದಾಲೆ ಗ್ರಾಮದ ನಿವಾಸಿಗಳು 2018 ರಲ್ಲೂ ಇದೇ ಪರಿಸ್ಥಿತಿ ಎದುರಿಸಿದ್ದರು. ಮನೆಮಠಗಳನ್ನು ತೊರೆದು ಹೋಗಿದ್ದರು. ಇದು ಎರಡನೇ ಬಾರಿಗೆ ಮನೆಗಳು ಬಿಟ್ಟು ತೆರಳುತ್ತಿದ್ದೇವೆ ಎಂದು ಅವರು ಅವಲತ್ತುಕೊಂಡಿದ್ದಾರೆ.
ಮನೆಗಳು 2018 ರಿಂದಲೇ ಅಪಾಯ ಇದೆ ಎಂದು ಪಂಚಾಯತಿ ಆದಿಕಾರಿಗಳಿಗೆ ಗೋತ್ತಿದ್ದರೂ ಪರ್ಯಾಯವಾಗಿ ಮನೆಗಳನ್ನು ನೀಡಿಲ್ಲ, ಪರಿಹಾರವನ್ನೂ ಮಾಡಿಲ್ಲ ಎಂದು ನಿರಾಶ್ರಿತರು ಅಕ್ರೋಶ ಹೋರ ಹಾಕಿದ್ದಾರೆ.

ಸದ್ಯ, ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಗ್ರಾಮದ ಮೊರಾರ್ಜಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.
ನಿರಾಶ್ರಿತರಿಗೆ ಅಗತ್ಯತೆಗಳನ್ನು ಸೋಮವಾರಪೇಟೆ ತಹಶಿಲ್ದಾರ್ ಕೃಷ್ಣ ಮೂರ್ತಿ ಪೂರೈಸಿದ್ದು, ಯಾವುದೇ ಭಯ ಇಲ್ಲದೇ ಮಳೆಗಾಲ ಕಳೆಯುವವರೆಗೂ ಕಾಳಜಿ ಕೇಂದ್ರಗಳಲ್ಲೇ ಆಶ್ರಯ ಪಡೆಯಬೇಕು ಎಂದು ನಿರಾಶ್ರಿತರಿಗೆ ಧೈರ್ಯ ತುಂಬಿದ್ದಾರೆ.