ಕೋಲ್ಕತ್ತಾ: ಇಂದಿನಿಂದ ಐಪಿಎಲ್ ಹಂಗಾಮಾ ಆರಂಭವಾಗಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ.
ಬಾಲಿವುಡ್ ಸ್ಟಾರ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮಾತನಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಗಾಯಕಿ ಶ್ರೇಯಾ ಘೋಷಾಲ್ ಅಭಿಮಾನಿಗಳನ್ನು ಮೋಡಿ ಮಾಡಿದರು. ನಟಿ ದಿಶಾ ಪಟಾನಿ ಅದ್ಭುತ ನೃತ್ಯದಿಂದ ಅಭಿಮಾನಿಗಳ ಮನ ಗೆದ್ದರು. ಅಲ್ಲದೇ, ಹಲವರು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಟಿ ದಿಶಾ ಪಟಾನಿ ಮನಮೋಹಕ ನೃತ್ಯದ ಮೂಲಕ ಗಮನ ಸೆಳೆದರು. ಶ್ರೇಯಾ ಘೋಷಾಲ್ ‘ವಂದೇ ಮಾತರಂ’, ‘ಮೇರೆ ಧೋಲ್ನಾ’, ‘ಕರ್ ಹರ್ ಮೈದಾನ್ ಫತೇ’, ‘ಘೂಮರ್’ ಹಾಡು ಹಾಡಿದರು.
ಪುಷ್ಪಾ 2 ಸಿನಿಮಾದ ಫೇಮಸ್ ‘ಸಾಮಿ ಸಾಮಿ’ ಹಾಡು ಕೇಳುತ್ತಿದ್ದಂತೆ ಫ್ಯಾನ್ಸ್ ರೋಮಾಂಚಿತರಾಗಿ ಕೂಗುತ್ತಾರೆ. ಈ ವೇಳೆ ಶಾರುಖ್ ಖಾನ್ ಅವರು ರಿಂಕು ಸಿಂಗ್, ವಿರಾಟ್ ಕೊಹ್ಲಿಯನ್ನು ವೇದಿಕೆ ಮೇಲೆ ಕರೆದು ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳು ಈ ವೇಳೆ ಹುಚ್ಚೆದ್ದು ಕುಣಿದಿದ್ದಾರೆ. ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ.