ಬೆಂಗಳೂರು: ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಘೋಷಣೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅಂದರೆ, 2025-26ನೇ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದ ಅವಧಿಗೆ ಬಡ್ಡಿ ದರ ಘೋಷಣೆ ಮಾಡಿದೆ. ಆದರೆ, ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಸರ್ಕಾರ ಯಥಾಸ್ಥಿತಿಯಲ್ಲೇ ಮುಂದುವರಿಸಿದೆ.
ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಏರಿಕೆ ಮಾಡಲಿದೆ ಎಂದು ಹೂಡಿಕೆದಾರರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದನ್ನು ಕೇಂದ್ರ ಸರ್ಕಾರವೀಗ ಹುಸಿ ಮಾಡಿದಂತೆ ಆಗಿದೆ.
ಇದರೊಂದಿಗೆ ಕಳೆದ ಸತತ 7 ತ್ರೈಮಾಸಿಕಗಳಿಂದಲೂ ಸರ್ಕಾರ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ, ಕಳೆದ 21 ತಿಂಗಳುಗಳಿಂದಲೂ ಕೇಂದ್ರ ಸರ್ಕಾರವು ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿಲ್ಲ. ಈಗ ಮತ್ತೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ?
• ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಯೋಜನೆಗೆ ಶೇ.7.1ರಷ್ಟು ರಿಟರ್ನ್ಸ್
• ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS)ಯೋಜನೆಗೆ ಶೇ.8.2ರಷ್ಟು ಬಡ್ಡಿ
• ಸುಕನ್ಯಾ ಸಮೃದ್ಧಿ ಯೋಜನೆಗೆ (SSY)ಶೇ.8.2ರಷ್ಟು ಬಡ್ಡಿದರ ಲಭ್ಯ
• ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಗೆ ಶೇ.7.7ರಷ್ಟು ರಿಟರ್ನ್ಸ್
• ಪೋಸ್ಟ್ ಆಫೀಸ್ ಮಾಸಿಕ ಆದಾಯ (POMIS) ಯೋಜನೆಗೆ ಶೇ.7.4ರಷ್ಟು ಬಡ್ಡಿ
• ಕಿಸಾನ್ ವಿಕಾಸ್ ಪತ್ರ (KVP) ಯೋಜನೆಗೆ ಶೇ.7.5ರಷ್ಟು ಬಡ್ಡಿದರ ಲಭಿಸಲಿದೆ
ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿ ಸುದ್ದಿ | ಪಿಎಂ ಕಿಸಾನ್ ಯೋಜನೆಯ 2 ಸಾವಿರ ರೂ. ಜಮೆ ಯಾವಾಗ? ಇಲ್ಲಿದೆ ಮಾಹಿತಿ



















