ಬೈಂದೂರು : ಜೆಸಿಐ ಉಪ್ಪುಂದ ಸುಪ್ರೀಮ್, ಲಯನ್ಸ್ ಕ್ಲಬ್ ನಾವುಂದ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ, ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದ ಎಸ್.ಡಿ.ಎಂ ಸಮನ್ವಯ ವೇದಿಕೆ, ಬೈಂದೂರು ತಾಲೂಕು ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಮತ್ತು ಕ್ರೀಡಾ ಸ್ಪರ್ಧೆ ಹಾಗೂ ಗುರುವಂದನಾ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದಲ್ಲಿ ನಡೆಯಿತು.
ಶಾಸಕ ಗುರುರಾಜ್ ಗಂಟಿಹೊಳೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡು ಬಂದಂತಹ ಇಂತಹ ಹಲವಾರು ಸಂಘಟನೆ ಒಟ್ಟಾಗಿ ಒಂದು ಇಂತಹದ್ದೊಂದು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡುತ್ತಿರುವುದು ಮಾದರಿ ಕೆಲಸ ಎಂದು ಶ್ಲಾಘಿಸಿದರು.
ಜೆಸಿಐ ಉಪ್ಪುಂದ ಸುಪ್ರೀಮ್ JFD. ಜ್ಯೋತಿ ಜಯರಾಮ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗುರುವಂದನಾ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕ ಗಿರೀಶ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಿರಿಮಂಜೇಶ್ವರದ ಅಧ್ಯಕ್ಷ ಶೇಖರ ಖಾರ್ವಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ರೋಟರಿ ಕ್ಲಬ್ ಗಂಗೊಳ್ಳಿಯ ಅಧ್ಯಕ್ಷ ಕೃಷ್ಣ ಪೂಜಾರಿ, ಲಯನ್ಸ್ ಕ್ಲಬ್ ನಾವುಂದ ಇದರ ಅಧ್ಯಕ್ಷ ನಿತ್ಯಾನಂದ ಆಚಾರ್ಯ, ಶಿಕ್ಷಕ ಮಂಜು. ಎಂ. ಪೂಜಾರಿ, ಮುಖ್ಯ ಸರಕಾರಿ ಆಸ್ಪತ್ರೆ ಕಿರಿಮಂಜೇಶ್ವರದ ಶಿಕ್ಷಕ ಭಾಸ್ಕರ ಖಾರ್ವಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಸರೋಜ ಎಂ, JC ಹುಸೇನ್ ಹೈಕಾಡಿ, ಹಳೆ ವಿದ್ಯಾರ್ಥಿ ಉಪಾಧ್ಯಕ್ಷ ಪದ್ಮನಾಭ ಹೆಬ್ಬಾರ್, ಎಸ್.ಡಿ.ಎಂ.ಸಿ ಕಾಯದರ್ಶಿ ರೇಖಾ ಗಣೇಶ್, ವಿವಿಧ ಸಂಘದ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜೇಸಿಐ ಉಪ್ಪುಂದ ಸುಪ್ರೀಮ್ ಇದರ ಅಧ್ಯಕ್ಷರಾದ JFD. ಜ್ಯೋತಿ ಜಯರಾಮ ಶೆಟ್ಟಿ, ಸ್ವಾಗತಿಸಿದರು, IPP ಜೇಸಿಐ ಉಪ್ಪುಂದ ಸುಪ್ರೀಮ್ ಇದರ ಕಾರ್ಯಕ್ರಮ ನಿರ್ದೇಶಕರು JFD ಸುಮಾ ಆಚಾರ್ ನಿರೂಪಿಸಿದರು, ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ನಿತ್ಯಾನಂದ ಆಚಾರ್ಯ ವಂದಿಸಿದರು.

