ಬೆಂಗಳೂರು: ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ 3ನೇ ಹಂತದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ.
ಮೈಸೂರಿನಲ್ಲಿ 2ನೇ ಶೆಡ್ಯೂಲ್ ಮುಗಿಸಿ ಚಿತ್ರತಂಡ 10 ದಿನಗಳ ಹಿಂದೆ ಜೈಪುರಕ್ಕೆ ತೆರಳಿತ್ತು. ಇದೀಗ ಅಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದೆ. ಶತಾಯ ಗತಾಯ ಇದೇ ವರ್ಷ ‘ಡೆವಿಲ್’ ಸಿನಿಮಾ ತೆರೆಗೆ ತರುವ ಪ್ರಯತ್ನ ಈಗ ಚಿತ್ರ ತಂಡದಿಂದ ನಡೆಯುತ್ತಿದೆ. ದಸರಾಗೆ ತಪ್ಪಿದರೆ ಕ್ರಿಸ್ ಮಸ್ ವೇಳೆಗೆ ಡೆವಿಲ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
2023ರಲ್ಲಿ ವರ್ಷದ ಕೊನೆಗೆ ‘ಕಾಟೇರ’ ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕಳೆದ ವರ್ಷ ‘ಡೆವಿಲ್’ ಚಿತ್ರವನ್ನು ಅದೇ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಕಾರಣಕ್ಕೂ ಮಿಸ್ ಮಾಡದೆ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ತಂಡ ಹೇಳಿದೆ. ಅಭಿಮಾನಿಗಳು ಮಾತ್ರ ಆದಷ್ಟು ಬೇಗ ಡೆವಿಲ್ ತೆರೆಗೆ ಅಪ್ಪಳಿಸಲಿ ಎಂದು ಹೇಳುತ್ತಿದ್ದಾರೆ.