ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತವರಿಗೆ ವಾಪಾಸ್ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ ತಂಡ ಈ ಪ್ರವಾಸ ಕೈಗೊಂಡಿದೆ. ಆದರೆ ಗಂಭೀರ್ ತಾಯಿಗೆ ಹೃದಯಾಘಾತವಾಗಿದ್ದು, ಅವರು ಭಾರತಕ್ಕೆ ತುರ್ತು ಪ್ರಯಾಣ ಬೆಳೆಸಿದ್ದಾರೆ. ಗಂಭೀರ್ ತಾಯಿ ಸೀಮಾ ಅವರಿಗೆ ನಿನ್ನೆ ಹೃದಯಾಘಾತವಾಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆ ಲಂಡನ್ ನಿಂದ ಭಾರತಕ್ಕೆ ಗಂಭೀರ್ ಪ್ರಯಾಣ ಬೆಳೆಸಿದ್ದಾರೆ.
ತಾಯಿ ಆರೋಗ್ಯ ವಿಚಾರಿಸಲಿರುವ ಗಂಭೀರ್, ಮುಂದಿನ ವಾರದ ಹೊತ್ತಿಗೆ ಮತ್ತೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಗಳಿವೆ ಅಂತಾ ಬಿಸಿಸಿಐ ಸ್ಪಷ್ಟಪಡಿಸಿದೆ. ಇನ್ನು ಗಂಭೀರ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್, ಟೆನ್ ಡೊಶ್ಯಾಟ್ ತಂಡದ ಉಸ್ತುವಾರಿ ವಹಿಸಲಿದ್ದಾರೆ.