ಮದ್ವೆ ಶಾಸ್ತ್ರಗಳನ್ನು ಮನೆ ಮಂದಿ ಸಂಭ್ರಮಿಸುವುದನ್ನು ನೀವು ನೋಡಿರುತ್ತೀರಿ. ಈಗಂತೂ ಅರಶಿನ ಶಾಸ್ತ್ರಕ್ಕೆ ಮನೆ ಮಂದಿಯೆಲ್ಲರೂ ಎಲ್ಲೋ ಕಲರ್ ಥೀಮ್‌ನಲ್ಲೇ ರೆಡಿ ಆಗ್ತಾರೆ. ಆದರೆ ಇಲ್ಲೊಬ್ಬ ಯುವಕನು ಸ್ನೇಹಿತನ ಹಳದಿ ಶಾಸ್ತ್ರಕ್ಕೆ ಸ್ವಲ್ಪ ಡಿಫರೆಂಟ್ ಆಗಿಯೇ ಬಂದಿದ್ದಾನೆ. ಹಳದಿ ಬಣ್ಣದ ಉಡುಗೆ ಇಲ್ಲವೆಂದು ಬ್ಲಿಂಕಿಟ್ ಸಮವಸ್ತ್ರ ಧರಿಸಿ ಎಂಟ್ರಿ ಕೊಟ್ಟಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇತರರು ಸಾಂಪ್ರದಾಯಿಕ ಹಳದಿ ಬಟ್ಟೆಗಳನ್ನು ಧರಿಸಿದ್ದರು. ಈ ಯುವಕ ವರ ಮತ್ತು ವಧುವಿನ ಬಳಿಗೆ ನಡೆದುಕೊಂಡು ಹೋಗುತ್ತಿದ್ದಂತೆ, ಇಬ್ಬರೂ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದು, ಆ ಬಳಿಕ ಈತನ ಉಡುಗೆ ಕಂಡು ಜೋರಾಗಿ ನಕ್ಕಿದ್ದಾರೆ.
ಈ ವಿಡಿಯೋ ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಸ್ಟ್ ಹಳದಿ ಡ್ರೆಸ್ಸಿಂಗ್ ಅವಾರ್ಡ್ ನಿಮಗೆ ಸಲ್ಲುತ್ತದೆಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬ್ಲಿಂಕಿಟ್ ಈ ಯುವಕನನ್ನು ಮಾರ್ಕೆಟಿಂಗ್‌ಗೆ ನೇಮಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಉಳಿತು, ಕಾರ್ಯಕ್ರಮಕ್ಕೆ ಮಿಸ್ ಮಾಡಿದ್ದಂಗೆ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು ಈ ವಿಡಿಯೋ ನೋಡಿ ಸಖತ್ ನಕ್ಕಿದ್ದಾರೆ.
ಇದನ್ನೂ ಓದಿ : ಪೋಕ್ಸೋ ಕೇಸ್ ; ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ | ಉಪನ್ಯಾಸಕನ ಬಂಧನ



















