ಯಾದಗಿರಿ | ಸಿಸಿಎಲ್ ಪಂದ್ಯ ಮುಗಿಸಿ ಬರುವಾಗ ನಿನ್ನೆ ತಡರಾತ್ರಿ ಯಾದಗಿರಿ ಜಿಲ್ಲೆಯ ಹೈವೇಯಲ್ಲಿ ಮಾಜಿ ಸಚಿವ ರಾಜುಗೌಡ ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ಪಂದ್ಯ ಮುಗಿಸಿ ವಿಶಾಖಪಟ್ಟಣಂನಿಂದ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜುಗೌಡ ಕಿಚ್ಚ ಸುದೀಪ್ ಅತ್ಯಾಪ್ತರಾಗಿದ್ದಾರೆ. ಜೊತೆಗೆ ಮಾಜಿ ಸಚಿವರಾಗಿದ್ದು, ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರು ಸಿಸಿಎಲ್ ಪಂದ್ಯದಲ್ಲಿ ಭಾಗವಹಿಸಿ, ನಂತರ ವಾಪಾಸ್ ಆಗುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಿಸಿಎಲ್ ಮೊದಲ ಪಂದ್ಯ ಮುಗಿದ ನಂತರ ಹೈದರಾಬಾದ್ ಮೂಲಕ ಯಾದಗಿರಿಗೆ ರಾಜುಗೌಡ ಅವರು ಮರಳುತ್ತಿದ್ದರು. ರಾತ್ರಿ ಸಮಯದಲ್ಲಿ ಯಾದಗಿರಿ ಹೈವೇ ಗಂಜ್ ಬಳಿ ಬರುವ ವೇಳೆ ಟ್ರಕ್ ಒಂದು ಅವರ ಕಾರಿಗೆ ಹಿಂದಿನಿಂದ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ನಿಯಂತ್ರಣ ತಪ್ಪಿದೆ, ಆದರೆ ಅದೃಷ್ಟವಶಾತ್ ರಾಜುಗೌಡ ಮತ್ತು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ.
ಇದನ್ನೂ ಓದಿ : ಬೆಳ್ತಂಗಡಿಯಲ್ಲಿ ಹಾಡಹಗಲೇ ಚಿರತೆ ದಾಳಿ | ಅಡಿಕೆ ಮರವೇರಿ ಪ್ರಾಣ ಉಳಿಸಿಕೊಂಡ ರೈತ!



















