ಹಿಂದು ಧರ್ಮದ ಪವಿತ್ರ ಹಬ್ಬ ಗಣೇಶ ಹಬ್ಬಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಗಣೇಶನನ್ನು ಮನೆಗೆ ತರಲು ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಗಣೇಶನ ಭಕ್ತರಲ್ಲಿ ಕೆಲವೊಂದಿಷ್ಟು ಗೊಂದಲವಿದೆ. ಗಣೇಶ ಮೂರ್ತಿ ಯಾವ ರೀತಿ ಪ್ರತಿಷ್ಠಾಪಿಸಬೇಕು, ಏನೆಲ್ಲಾ ನಿಯಮ ಪಾಲಿಸಬೇಕು ಅಂತ…
ಎಡಕ್ಕೆ ಸೊಂಡಿಲು ಇರುವ ಗಣಪತಿ ಮೂರ್ತಿಯನ್ನು ಖರೀದಿಸಿ. ಅಂತಹ ಮೂರ್ತಿಯನ್ನು ಪೂಜಿಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ. ಜೊತೆಗೆ ಗಣೇಶ ಮೂರ್ತಿಯನ್ನು ಇಡುವ ಮೊದಲು, ಪೂಜಾ ಸ್ಥಳವನ್ನು ಗಂಗಾ ಜಲದಿಂದ ಸಿಂಪಡಿಸಿ ಸ್ವಚ್ಛಾ ಮಾಡುವುದರಿಂದ ತುಂಬಾ ಒಳ್ಳೆಯದು ಎಂಬ ನಂಬಿಕೆ ಹಲವರದ್ದಾಗಿದೆ.
ವಿಗ್ರಹವನ್ನು ನೇರವಾಗಿ ನೆಲದ ಮೇಲೆ ಇಡುವ ಬದಲು ಕೆಂಪು ಅಥವಾ ಹಳದಿ ಬಟ್ಟೆಯಿಂದ ಮುಚ್ಚಿದ ಶುದ್ಧ ಪೀಠ ಅಥವಾ ದರ್ಭಾಸನದ ಮೇಲೆ ಇರಿಸಿ. ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಅಭಿಷೇಕವನ್ನು ಮಾಡಬೇಕು. ಇದರ ನಂತರ, “ಪ್ರಾಣ ಪ್ರತಿಷ್ಠಾ” ಎಂಬ ಮಂತ್ರವನ್ನು ಪಠಿಸುವ ಮೂಲಕ ವಿಗ್ರಹಕ್ಕೆ ಪ್ರಾಣವನ್ನು ತುಂಬಿಸಿ. ಇದಲ್ಲದೇ ಗಣೇಶನ ಪೂಜೆಯಲ್ಲಿ ಸಿಂಧೂರ ಮತ್ತು ದರ್ಬೆ ಹುಲ್ಲು ಅರ್ಪಿಸುವುದು ಬಹಳ ಶುಭವೆಂದು ನಂಬಿಕೊಂಡು ಬಂದ ಪ್ರತೀತಿಯಾಗಿದೆ.