ಶಾಲಾ ಮಕ್ಕಳಿಗೆ ಪ್ಲೇವರ್ಡ್ ನಂದಿನಿ ಹಾಲು ವಿತರಿಸಲು ಬಮೂಲ್ ಮುಂದಾಗಿದ್ದು, ಈಗಾಗಲೇ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಕೆ ಮಾಡಿದೆ.

ಪೌಡರ್ ಹಾಲಿನ ದುರ್ಬಳಕೆ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಸೇರಿದಂತೆ ಮುಂತಾದ ರುಚಿಕರವಾದ ಫ್ಲೇವರ್‌ಗಳಲ್ಲಿ ಹಾಲು ವಿತರಿಸಲು ಚಿಂತನೆ ನಡೆಸಲಾಗಿದೆ.
ಮಕ್ಕಳಿಗೆ ಕೊಡುತ್ತಿರುವ ಪೌಡರ್ ರೂಪದ ಹಾಲು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಳಾಗಿದೆ. ಮಕ್ಕಳ ಕೈಗೆ ಹಾಲು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಟೆಟ್ರಾ ಪ್ಯಾಕ್ ನಲ್ಲಿ ಪೂರೈಸಲು ಚಿಂತನೆ ನಡೆದಿದೆ. ಸರ್ಕಾರ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರೆ ವಿದ್ಯಾರ್ಥಿಗಳಿಗೆ ರುಚಿರುಚಿಯಾದ ಹಾಲು ಸಿಗಲಿದೆ.



















