ಸ್ಕ್ರ್ಯಾರ್ಪ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬೆಂಗಳೂರಿನ ಪೆರಿಯಾರ್ ನಗರದಲ್ಲಿ ನಡೆದಿದೆ. ಬೆಂಕಿ ಅನಾಹುತದಿಂದ ಸಾವಿರಾರು ರೂ. ಮೌಲ್ಯದ ಸ್ಕ್ರ್ಯಾಪ್ ಐಟಂಗಳು ಭಸ್ಮವಾಗಿದ್ದು, ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಆದರೆ, ಗೋಡೌನ್ ಮಾಲೀಕನಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ ಎನ್ನಲಾಗಿದೆ.



















