ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವರ್ಷದ ಕೊನೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಲಕ್ನೋದಲ್ಲಿ ನಡೆದ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್ ಫೈನಲ್ ಸಿಂಧು ಗೆದ್ದಿದ್ದಾರೆ. ಸಿಂಧು ಅವರು ಈ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಎದುರು ಸೆಣಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಸಿಂಧು ಅವರು ಚೀನಾದ ಆಟಗಾರ್ತಿ ಲುವೊ ಯು ವು ಅವರನ್ನು 21-14 21-16 ನೇರ ಸೆಟ್ ಗಳಿಂದ ಮಣಿಸಿ ಸಿಂಧು ಮೂರನೇ ಬಾರಿಗೆ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಸಿಂಧು 2017 ಮತ್ತು 2022 ರಲ್ಲಿ ಈ ಪ್ರಶಸ್ತಿ ಗೆದ್ದಿದ್ದರು.
21-14, 21-16ರ ನೇರ ಸೆಟ್ ಗಳಿಂದ ಪಂದ್ಯ ಗೆದ್ದಿದ್ದಾರೆ. ಸಿಂಧುಗೆ ಇದು 2024 ರಲ್ಲಿ ಒಲಿದ ಮೊದಲ ಪ್ರಶಸ್ತಿಯಾಗಿದೆ.