ಬಂದಿಖಾನೆ ಎಡಿಜಿಪಿ ದಯಾನಂದ್ ಅವರ ಪೋಟೋ ಮತ್ತು ಹೆಸರನ್ನು ಹಾಕಿ ಕಿರಾತಕರು ನಕಲಿ ಫೇಸ್ ಬುಕ್ ಅಕೌಂಟ್ ತರೆದು ಹಣಕ್ಕಾಗಿ ಡಿಮ್ಯಾಂಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆಯೂ ಎರಡು ಮೂರು ಬಾರಿ ನಕಲಿ ಅಕೌಂಟ್ ಓಪನ್ ಮಾಡಿದ್ದಾರೆ. ಈ ಬಗ್ಗೆ ಮಾಜಿ ಕಮಿಷನರ್ ದಯಾನಂದ್ ಅವರು ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಆದರೂ ಸೈಬರ್ ಖದೀಮರು ಅಕೌಂಟ್ ಓಪನ್ ಕೆಲಸ ಮುಂದುವರೆಸಿದ್ದಾರೆ.

ಇತ್ತೀಚೆಗೆ ಜೈಲಿ ವಿಡಿಯೋ ವೈರಲ್ ಬಳಿಕ ಭಾರೀ ಸುದ್ದಿಯಾಗಿತ್ತು. ದಯಾನಂದ್ ಗೆ ಕೆಟ್ಟ ಹೆಸರು ತರಲು ವಿಡಿಯೋ ವೈರಲ್ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಅಕೌಂಟ್ ಓಪನ್ ಮಾಡಿದ್ದಲ್ಲದೇ ಹಲವು ಮಂದಿಗೆ ಫ್ರೇಂಡ್ ರಿಕ್ವೇಸ್ಟ್ ಸಹ ಕಳುಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಮೊಬೈಲ್ ಶಾಪ್



















