ಬೆಂಗಳೂರು: ಸರ್ಕಾರಿ ಉದ್ಯೋಗ ಪಡೆಯಬೇಕು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನೌಕರರ ರಾಜ್ಯ ವಿಮಾ ನಿಗಮದಲ್ಲಿ (ESIC Karnataka Recruitment 2026) ಖಾಲಿ ಇರುವ 32 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಸೀನಿಯರ್ ರೆಸಿಡೆಂಟ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಇಎಸ್ಐಸಿ ಕಲಬುರಗಿ
ಹುದ್ದೆ ಹೆಸರು: ಸೀನಿಯರ್ ರೆಸಿಡೆಂಟ್
ಒಟ್ಟು ಹುದ್ದೆಗಳು: 32
ಉದ್ಯೋಗ ಸ್ಥಳ: ಕಲಬುರಗಿ
ಸಂದರ್ಶನದ ದಿನಾಂಕ: ಅಕ್ಟೋಬರ್ 26 ಹಾಗೂ 27
ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಎಂಡಿ, ಎಂಎಸ್ ಕೋರ್ಸ್ ಮುಗಿಸಿರಬೇಕು. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 44 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದವರಿಗೆ 1.42 ಲಕ್ಷ ರೂ.ವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಎಸ್ಸಿ, ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಸಮುದಾಯದವರಿಗೆ 300 ರೂ. ಅರ್ಜಿ ಶುಲ್ಕ ಇರುತ್ತದೆ.
ಅಭ್ಯರ್ಥಿಗಳು ಮೊದಲು https://esic.gov.in/ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಧಿಸೂಚನೆ ಓದಿದ ಬಳಿಕ ಅರ್ಜಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನಿಗದಿತ ದಿನಾಂಕದಂದು ನಡೆಯುವ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಂದರ್ಶನ ನಡೆಯುವ ಸ್ಥಳ
ಡೀನ್ ಕಚೇರಿ, ಇಎಸ್ಐಸಿ ಮೆಡಿಕಲ್ ಕಾಲೇಜು, ಕಲಬುರಗಿ
ದಿನಾಂಕ: ಅಕ್ಟೋಬರ್ 26 ಹಾಗೂ 27
ಸಮಯ: ಬೆಳಗ್ಗೆ 9
ಇದನ್ನೂ ಓದಿ:ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?


















