ಬೆಂಗಳೂರು: ನಗರದ ಏರ್ ಪೋರ್ಟ್ ರಸ್ತೆಯ ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ ಸಂಭಿಸಿದ್ದು, ಇಬ್ಬರು ಬಲಿಯಾಗಿದ್ದಾರೆ.
ಬಿಎಂಟಿಸಿ ಬಸ್, ಟ್ರಕ್ ಹಾಗೂ ಇನೋವಾ ಕಾರುಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಇಬ್ಬರು ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವನ್ನಪ್ಪಿದವರು ಹಾಗೂ ಗಾಯಗೊಂಡವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ತಡರಾತ್ರಿ ಯಲಹಂಕ ಮೇಲ್ಸೇತುವೆ ಹತ್ತಿರ ಸಿಮೆಂಟ್ ಲಾರಿಯು ವೇಗವಾಗಿ ಬಂದು ಇನೋವಾ ಕಾರಿಗೆ ಗುದ್ದಿದೆ. ಹೀಗಾಗಿ ಕಾರು ಚಾಲಕ ಮತ್ತು ಟ್ರಕ್ ಚಾಲಕ ಗಲಾಟೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಏರ್‌ಪೋರ್ಟ್ ಮಾರ್ಗದ ಬಿಎಂಟಿಸಿ ವೋಲ್ವೊ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಿಂದ ವಾಹನಗಳು ಜಖಂ ಆಗಿದ್ದು, ಕ್ರೇನ್ ಮೂಲಕ ತೆರವು ಮಾಡಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.